ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು

ಶೇರ್ ಮಾಡಿ

ಅಕಸ್ಮಿಕವಾಗಿ ಬಾವಿಗೆ ಬಿದ್ದ ಚಿರತೆಯನ್ನು ಊರವರ ಸಹಕಾರದೊಂದಿಗೆ ಅರಣ್ಯಾಧಿಕಾರಿಗಳು ರಕ್ಷಿಸಿದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.

ತಾಲೂಕಿನ ಪುರಸಭಾ ವ್ಯಾಪ್ತಿಯ ಮಾರೂರು ಗುತ್ತು ಬಳಿಯ ಎಸ್ ಸಿ ಕಾಲನಿಯಲ್ಲಿರುವ ಬಾವಿಯೊಂದಕ್ಕೆ ದೊಡ್ಡ ಗಾತ್ರದ ಚಿರತೆಯೊಂದು ಆಯತಪ್ಪಿ ಬಿದ್ದಿದೆ.

ಈ ಬಗ್ಗೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಅವರ ಮಾರ್ಗದರ್ಶನದೊಂದಿಗೆ ವಲಯಾರಣ್ಯಾಧಿಕಾರಿ ಹೇಮಗಿರಿ ಅಂಗಡಿ ನೇತೃತ್ವದ ಸಿಬಂದಿಗಳ ತಂಡವು ತಕ್ಷಣ ಸ್ಥಳಕ್ಕಾಗಮಿಸಿದ ಕಾರ್ಯಪ್ರವೃತರಾಗಿ ಬಾವಿಗೆ ಬಲೆ ಹಾಕಿ ಬೋನು ಇಟ್ಟು ಅದರೊಳಗೆ ಚಿರತೆ ಬರುವಂತೆ ಮಾಡಲಾಗಿತ್ತು. ಬೋನಿನ ಒಳಗೆ ಬಂದ ಚಿರತೆಯನ್ನು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಲಾಗಿದೆ.

Leave a Reply

error: Content is protected !!
%d