ಘಟಕಾಧ್ಯಕ್ಷ ಶೇಖರ್ ಗೌಂಡತ್ತಿಗೆ ಮತ್ತು ನಿಕಟಪೂರ್ವ ಅಧ್ಯಕ್ಷ ಮೋಹನ್ ಚಂದ್ರ ಅವರಿಗೆ ಪ್ರಶಸ್ತಿ
ಜೇಸಿಐ ಪುತ್ತೂರು ಘಟಕದ ನೇತೃತ್ವದಲ್ಲಿ ವಲಯ ಸಮ್ಮೇಳನ ಸಂಭ್ರಮ 2023 ಸಮ್ಮೇಳನವು ಜೇಸಿ ಪುರುಷೋತ್ತಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ವಲಯದ ಘಟಕಗಳ ಸಾಧನೆಗಳನ್ನು ಗುರುತಿಸಿ ವಲಯದಿಂದ ಪ್ರಶಸ್ತಿ ನೀಡಿ ಗೌರವಿಸಿದೆ. ಘಟಕ ಆಯೋಜಿಸಿದ ಹಲಸು ಹಬ್ಬ ಮತ್ತು ಆಹಾರ ಮೇಳಕ್ಕೆ “ಅತ್ಯುತ್ತಮ ಸ್ಥಳೀಯ ವ್ಯಾಪಾರ ವಾಣಿಜ್ಯೋದ್ಯಮ ರನ್ನರ್ ಪ್ರಶಸ್ತಿ”, ಭಾರತದ ರಾಷ್ಟ್ರೀಯ ಕಾರ್ಯಕ್ರಮದ ಪುರಸ್ಕಾರ, ಗೋಲ್ಡನ್ ಘಟಕ ಪ್ರಶಸ್ತಿ, ಜೇಸಿ ಸೇವಾ ರತ್ನ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಘಟಕಾಧ್ಯಕ್ಷ ಜೇಸಿ ಶೇಖರ್ ಗೌಂಡತ್ತಿಗೆ ಅವರನ್ನು ಗೌರವಿಸಿದೆ.
ಇದೇ ಸಂದರ್ಭದಲ್ಲಿ ವಲಯಾಧಿಕಾರಿಯಾದ ಘಟಕದ ನಿಕಟಪೂರ್ವ ಅಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಮನೆ ಅವರು ವಲಯದ ಪತ್ರಿಕೆ ಉದಕದ ಸಂಪಾದಕರಾಗಿ ನೀಡಿದ ಸೇವೆಯನ್ನು ಗುರುತಿಸಿ ವಲಯ ಸಂಯೋಜಕರಿಗೆ ಕೊಡಮಾಡುವ “ಅತ್ಯುತ್ತಮ ವಲಯ ಸಂಯೋಜಕರ ಪ್ರಶಸ್ತಿಯನ್ನು ವಲಯಾಧ್ಯಕ್ಷರು ನೀಡಿ ಗೌರವಿಸಿದರು.
ಸಮ್ಮೇಳನದಲ್ಲಿ ಘಟಕದ ಪೂರ್ವಾಧ್ಯಕ್ಷರಾದ ರಾಜಾರಾಂ, ಪ್ರಶಾಂತ್ ಕುಮಾರ್ ರೈ, ಹರೀಶ್ ನಾಯಕ್ ನಟ್ಟಿಬೈಲು, ಆನಂದ ರಾಮಕುಂಜ, ಉಮೇಶ್ ಆಚಾರ್ಯ, ಶಶಿಧರ್ ನೆಕ್ಕಿಲಾಡಿ, ಕಾರ್ಯದರ್ಶಿ ಸುರೇಶ್, ದಿವಾಕರ ಶಾಂತಿನಗರ, ಮುರಳೀಧರ, ಶ್ರೀಮತಿ ಪ್ರೇಮಾ ಆನಂದ ರಾಮಕುಂಜ, ಶ್ರೀಮತಿ ಭವಿತಾ, ಮಾಸ್ಟರ್ ದಿಶಾಂತ್ ಮತ್ತು ಮಾಸ್ಟರ್ ಅಭಿನವ್ ಭಾಗವಹಿಸಿದ್ದರು.