ಶಾಲಾ ವಿದ್ಯಾರ್ಥಿಗಳಲ್ಲಿ ಹೊಸ ಆವಿಷ್ಕಾರಗಳನ್ನು ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವ ಸಲುವಾಗಿ ಕಾರ್ಯನಿರ್ವಹಿಸುತ್ತಿರುವ INSEF Science Society of India ನಡೆಸಿರುವ INSEF – Regional Science Fair ನಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ, ಪುತ್ತೂರು ಇಲ್ಲಿನ 8ನೇ ತರಗತಿಯ ವಿದ್ಯಾರ್ಥಿಗಳಾದ ಓಂಕಾರ್ ಮಯ್ಯ (ಜಯಶೇಖರ ಮತ್ತು ಶ್ರೀಮತಿ ಲೀಲಾ ದಂಪತಿ ಪುತ್ರ), ಗೌತಮ ಕೃಷ್ಣ ಕೆ (ಮಹೇಶ್ ಪ್ರಸನ್ನ ಕೆ ಮತ್ತು ಶ್ರೀಮತಿ ಶ್ರೀಲತ ದಂಪತಿ ಪುತ್ರ), ಅತಿನ್ ಎಸ್ ಪ್ರಭು(ಸೂರ್ಯನಾರಾಯಣ ಪ್ರಭು ಮತ್ತು ಶ್ರೀಮತಿ ಸ್ವಾತಿ ಎಸ್ ಪ್ರಭು ದಂಪತಿ ಪುತ್ರ ) ಹಾಗು ಧನ್ವಿತ್ ಎಮ್ ಕೆ(ಕೆ ಮಾಧವ್ ಗೌಡ ಮತ್ತು ಶ್ರೀಮತಿ ಯಶೋದ ಕೆ ದಂಪತಿ ಪುತ್ರ) ಇವರ ತಂಡ, ಎನ್ ಅಭಯ್( ರಂಜನ್ ಎನ್ ಮತ್ತು ರಮ್ಯ ಯು ಎಚ್ ದಂಪತಿ ಪುತ್ರ), ಆರ್ಯನ್ ಸಿ ಆರ್(ರಮೇಶ್ ಕುಮಾರ್ ಸಿ ಎಚ್ ಮತ್ತು ಶ್ರೀಮತಿ ಕಾವ್ಯ ಟಿ ದಂಪತಿ ಪುತ್ರ) ಹಾಗು ದಿಶಾಂತ್ ಕೆ(ನಾರಾಯಣ ಮೂಲ್ಯ ಕೆ ಶ್ರೀಮತಿ ಮಮತ ದಂಪತಿ ಪುತ್ರ) ಇವರ ತಂಡ, ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಾದ ಅಭಿನವ್ ಆಚಾರ್ ಕೆ (ಪ್ರಶಾಂತ್ ಹಾಗೂ ಶ್ರೀಮತಿ ಶ್ರುತಿ ಎಸ್ ರಾವ್ ದಂಪತಿ ಪುತ್ರ) ಮತ್ತು ಶ್ರೀಜಿತ್ ಸಿ ಎಚ್ (ಗಣೇಶ್ ಭಟ್ ಚಿ.ಎಚ್ ಮತ್ತು ಶ್ರೀಮತಿ ರವಿಕಲಾ ಕೆ ದಂಪತಿ ಪುತ್ರ) ಇವರ ತಂಡ, ಹರ್ಷ ಕೆ(ಸುಂದರ ಪೂಜಾರಿ ಕೆ ಮತ್ತು ಶ್ರೀಮತಿ ಲತಾ ಕೆ ದಂಪತಿ ಪುತ್ರ) ಮತ್ತು ಪ್ರೀತಮ್ ಎಂ(ಬಾಸ್ಕರ್ ನಾಯ್ಕ್ ಎಂ ಮತ್ತು ಶ್ರೀಮತಿ ಗುಲಾಬಿ ಪಿ ದಂಪತಿ ಪುತ್ರ) ಇವರ ತಂಡ ಹೀಗೆ 7 ವಿಜ್ಞಾನ ಪ್ರಾಜೆಕ್ಟ್ ಗಳು ಆಯ್ಕೆಗೊಂಡಿವೆ.
ಆಯ್ಕೆಗೊಂಡ ವಿದ್ಯಾರ್ಥಿಗಳು ನವೆಂಬರ್ 25ನೇ ತಾರೀಕಿನಂದು ಮೂಡಬಿದ್ರೆಯಲ್ಲಿ ನಡೆಯಲಿರುವ INSEF – Regional Science Fair ನಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.