ಶಿಬಾಜೆ: ಜಾಗದ ವಿಚಾರವಾಗಿ ಮಹಿಳೆಯರ ಜೊತೆ ತಂಡವೊಂದು ಅನುಚಿತವಾಗಿ ವರ್ತಿಸಿರುವುದಲ್ಲದೇ, ಕೈಯಿಂದ ಹಲ್ಲೆ ನಡೆಸಿದ ಆರೋಪದಡಿ ನಾಲ್ವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ನೀಡಿದ ದೂರಿನ ಮೇರೆಗೆ ಒ ಟಿ ಜಾರ್ಜ್, ಒ ಟಿ ಕುರಿಯಾಕೋಸ್, ಪ್ರಮೋದ್ ಟಿ ಎಂ, ಮ್ಯಾಥ್ಯೂ ಟಿ ಕೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ದೂರುದಾರ ಮಹಿಳೆ ಹಾಗೂ ಆಪಾದಿತರ ನಡುವೆ ಜಾಗದ ವಿಚಾರದಲ್ಲಿ ತಕರಾರು ಇದೆ. ನ.7ರಂದು ಮಧ್ಯಾಹ್ನ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದಲ್ಲಿ ದೂರುದಾರ ಮಹಿಳೆಯ ಪತಿಯ ಸ್ವಾಧೀನದಲ್ಲಿರುವ ಸರಕಾರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಮಹಿಳೆಯ ಮನೆಯವರಿಗೆ ಯಾವುದೇ ಮಾಹಿತಿ ನೀಡದೆ ಖಾಸಗಿ ಸರ್ವೇಯವರ ಮೂಲಕ ಅಳತೆ ಮಾಡಲು ಬಂದಾಗ ಮಹಿಳೆ ಮತ್ತು ಮನೆಯವರು ತಡೆಯಲು ಹೋಗಿದ್ದು. ಆ ಸಮಯದಲ್ಲಿ ಮಹಿಳೆ ಮತ್ತು ಮಹಿಳೆಯೊಂದಿಗೆ ಇದ್ದ ಇನ್ನೋರ್ವ ಮಹಿಳೆಯ ಜೊತೆ ಆರೋಪಿಗಳಾದ ಒ.ಟಿ. ಜಾರ್ಜ್, ಒ.ಟಿ. ಕುರಿಯಾಕೋಸ್, ಪ್ರಮೋದ್ ಟಿ.ಎಂ ಮತ್ತು ಮ್ಯಾಥ್ಯೂ ಟಿ.ಕೆ. ಎಂಬವರು ಅನುಚಿತವಾಗಿ ವರ್ತಿಸಿರುವುದಲ್ಲದೆ ಕೈಯಿಂದ ಹಲ್ಲೆ ನಡೆಸಿದ್ದು, ಇದನ್ನು ತಡೆಯಲು ಹೋದ ಮಹಿಳೆಯ ಪತಿಗೂ ಕೈಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 88/2023 ಕಲಂ: 447.323.354.504.506.R/W.34 IPC ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.