ಬಿಗ್ ಬಾಸ್ ಕನ್ನಡ ಸೀಸನ್ 10 ರ ಬಗ್ಗೆ ಆರ್ಯವರ್ಧನ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಪೈನಿಲಿಸ್ಟ್‌ಗಳು ಯಾರಾಗಬಹುದೆಂಬ ಕುತೂಹಲ ಜನರಲ್ಲಿ ಹೆಚ್ಚಾಗುತ್ತಿದೆ. ಬಿಗ್ ಬಾಸ್ ಪೈನಿಲಿಸ್ಟ್‌ಗಳಾಗಲು ಅರ್ಹತೆಯುಳ್ಳ ಹಲವು ಸ್ಪರ್ಧಿಗಳು ಈ ಬಾರಿ ಕಾಣ ಸಿಗುತ್ತಿದ್ದಾರೆ. ಇದವರಲ್ಲಿ ಯಾರು ವಿನ್ ಆಗಬಹುದೆಂದು ಹೇಳುವುದು ಬಲು ಕಷ್ಟಕರ ಸಂಗತಿ. ಈ ನಡುವೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರಾಗಬಹುದೆಂದು ಭವಿಷ್ಯ ನುಡಿದಿದ್ದಾರೆ.
ಆರ್ಯವರ್ಧನ್ ಗುರೂಜಿ ಹೇಳಿರುವ ಹೆಸರು ಜನರಲ್ಲಿ ಆಶ್ಚರ್ಯ ಮೂಡಿಸಿದೆ. ಅಲ್ಲದೇ, ಈ ವ್ಯಕ್ತಿ ಬಿಗ್ ಬಾಸ್ ಗೆಲ್ಲೋದಾ ಎಂದು ಕೆಲವರು ಯೋಚಿಸುತ್ತಿದ್ದಾರೆ. ಅರಚಾಡಿ ಕಿರುಚಾಡಿ.. ತೊಡೆ ತಟ್ಟಿ ನಿಂತು ಟಾಸ್ಕ್ ಆಡಿ.. ಜಗಳ ಮಾಡಿ.. ಕಣ್ಣೀರಿಟ್ಟು ಹೈಡ್ರಾಮಾ ಸೃಷ್ಟಿಸುವವರ ನಡುವೆ ಸೈಲೆಂಟ್ ಆಗಿ ಮನೆಯೊಳಗೆ ಅಗತ್ಯವಿದ್ದಷ್ಟೇ ಮಾತನಾಡುವ ಈ ವ್ಯಕ್ತಿ ಬಿಗ್ ಬಾಸ್ ಗೆಲ್ಲುತ್ತಾರೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.
ಆರ್ಯವರ್ಧನ್ ಗುರೂಜಿ ಈ ಬಾರಿ ವರ್ತೂರ್ ಸಂತೋಷ್ ಬಿಗ್ ಬಾಸ್ ವಿನ್ ಆಗೋದು ಎಂದು ಹೇಳಿದ್ದಾರೆ. ವರ್ತೂರ್ ಸಂತೋಷ್ ಅವರದ್ದು ಮೀನ ರಾಶಿ. ಈ ರಾಶಿಯವರಿಗೆ ಇದು ಅನುಕೂಲಕರ ಸಮಯ. ಹೀಗಾಗಿ ಅವರು ಬಿಗ್ ಬಾಸ್ ಗೆಲ್ಲುವ ಸಾಧ್ಯತೆಯಿದೆ ಎಂದು ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ.
ವರ್ತೂರ್ ಸಂತೋಷ್ ಒಳ್ಳೆಯ ವ್ಯಕ್ತಿ, ರೈತನ ಮಗ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಸಿನಿಮಾ ಹಾಗೂ ಕಿರುತೆರೆಯಿಂದ ಬಂದ ಜನರೇ ಹೆಚ್ಚಾಗಿದ್ದಾರೆ. ಆದರೆ ವರ್ತೂರ್ ಸಂತೋಷ್ ರೈತ. ಮನೆಯ ಒಳಗೆ ಅವರನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ. ಹಾಗಾಗಿಯೇ ಹೊರಗೆ ಕಾನೂನು ರೀತಿಯಾಗಿ ಅವರನ್ನು ಕುಗ್ಗಿಸಲಾಗಿದೆ. ಜನ ಅವರನ್ನು ಬೆಂಬಲಿಸಬೇಕು. ಬ್ಯಾಟ್ಸ್ ಮನ್ 100 ರನ್ ಬಾರಿಸಲು ಆರಂಭದಲ್ಲಿ ರಕ್ಷಣಾತ್ಮಕವಾಗಿ ಆಡಲೇ ಬೇಕಾಗುತ್ತದೆ ಎಂದು ಆರ್ಯವರ್ಧನ್ ಹೇಳಿದ್ದಾರೆ.