
ದೊಡ್ಮನೆಯ ಆಟ ಈಗ 5ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಮನೆಯ ಅಸಲಿ ಆಟ ಈಗ ಶುರುವಾಗಿದೆ. ಆಟ ಆಡೋ ನೆಪದಲ್ಲಿ ಸ್ಪರ್ಧಿಗಳು ಮಾತು ಹೊರಬಂದಿದೆ. ಅದರಲ್ಲೂ ಹೀಯಾಳಿಸುವ ಭರದಲ್ಲಿ ಬಿಗ್ ಬಾಸ್ ಮನೆ ಹೊರಗಿನ ಕಾರ್ತಿಕ್ ಲವ್ ಬಗ್ಗೆ ಸ್ನೇಹಿತ್ ಬಾಯ್ಬಿಟ್ಟಿದ್ದಾರೆ.
ಎದರಾಳಿಯ ತಂಡಕ್ಕೆ ಕೋಪ ತರಿಸಿ, ಅವರು ರೂಲ್ಸ್ ಬ್ರೇಕ್ ಮಾಡುವಂತೆ ಮಾಡಬೇಕು. ಈ ಟಾಸ್ಕ್‌ನಲ್ಲಿ ವೈಯಕ್ತಿಕ ವಿಚಾರವೊಂದು ಹೊರಗೆ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಸಂಗೀತಾ ಹಾಗೂ ಕಾರ್ತಿಕ್ ಪ್ರೇಮಿಗಳ ರೀತಿ ನಡೆದುಕೊಳ್ಳುತ್ತಿದ್ದಾರೆ. ಆದರೆ, ಇದು ಬಿಗ್ ಬಾಸ್‌ಗೆ ಮಾತ್ರ ಸೀಮಿತವಾಗಿದೆಯಾ ಎಂಬ ಅನುಮಾನ ಈಗ ಪ್ರೇಕ್ಷಕರಲ್ಲಿ ಮೂಡಿದೆ. ಆ ಅನುಮಾನ ಮೂಡುವುದಕ್ಕೆ ಕಾರಣ ಸ್ನೇಹಿತ್ ಹೇಳಿದ ಆ ಒಂದು ಮಾತು. ಎದುರಾಳಿ ತಂಡಕ್ಕೆ ಕೋಪ ತರಿಸಬೇಕು ಎಂಬ ಟಾಸ್ಕ್‌ನಲ್ಲಿ ಸ್ನೇಹಿತ್, ಕಾರ್ತಿಕ್ ಬಳಿ ಆತನ ರಿಯಲ್ ಲೈಫ್ ಹುಡುಗಿ ಬಗ್ಗೆ ಮಾತನಾಡಿದ್ದಾರೆ.
ಹೊರಗೊಬ್ಬಳು ಹುಡುಗಿ ನಿನಗೋಸ್ಕರ ಹರಕೆ ಕಟ್ಟಿಕೊಂಡು ನೀನು ಬಿಗ್ ಬಾಸ್ ಬರಲಿ ಅಂತ ಪ್ರಾರ್ಥನೆ ಮಾಡಿದ್ರೆ, ಅಂತಹ ಹುಡುಗಿಯ ಹಾರ್ಟ್ ಬ್ರೇಕ್ ಮಾಡಿ. ಇಲ್ಲಿ ಅದು ಯಾವೋಳೋ ಕ್ರಶ್ ಅಂತೆ, ಯಾವೋಳೋ ಕ್ರ‍್ಯಾಶ್ ಆದವಳನ್ನ ಇಟ್ಟುಕೊಂಡು ಓಡಾಡುತ್ತಿದ್ದೀಯಲ್ಲ ನೀನು ನಮಗೆ ಲವ್ ಪಾಠ ಮಾಡುತ್ತಿದ್ದೀಯಾ ಎಂದು ಸ್ನೇಹಿತ್ ವೈಯಕ್ತಿಕ ವಿಚಾರ ಎಳೆದು ಕಾರ್ತಿಕ್ ಗೆ ತಿವಿದಿದ್ದಾರೆ. ಸಂಗೀತಾ ಬಗ್ಗೆ ಮಾತನಾಡಿ ಸ್ನೇಹಿತ್ ಕಿಡಿಕಾರಿದ್ದಾರೆ.
ಸ್ನೇಹಿತ್ ಈ ನಡೆ ಕಾರ್ತಿಕ್‌ಗೆ ಹರ್ಟ್ ಮಾಡಿದೆ. ನಾನು ಒಳಗಿನ ವಿಚಾರ ಅಷ್ಟೇ ಮಾತನಾಡಿದ್ದು. ತೆಗೆದರೆ ಸಾವಿರ ತೆಗೆಯಬಹುದಿತ್ತು ಎಂದು ಕಾರ್ತಿಕ್ ಹೇಳಿದಾಗ, ಕ್ಷಮೆ ಇರಲಿ, ಫ್ಲೋನಲ್ಲಿ ಬಂದು ಬಿಡ್ತು ಅಂತ ಸ್ನೇಹಿತ್ ಹೇಳಿದ್ದಾರೆ.
ಮನೆಯ ಹೊರಗೆ ಕಾರ್ತಿಕ್ ಗೆ ಲವ್ ಇರೋದು ಈಗ ಬೆಳಕಿಗೆ ಬಂದಿದೆ. ಹಾಗಾದ್ರೆ ಪ್ರೇಮಿಗಳಾಗಿ ಹೈಲೆಟ್ ಆಗುತ್ತಿರುವ ಸಂಗೀತಾ ಶೃಂಗೇರಿ ಕಥೆಯೇನು. ಪ್ರೇಕ್ಷಕರ ಕಣ್ಣಿಗೆ ಬೀಳಲು ಹೀಗೆ ಮಾಡ್ತೀದ್ದಾರಾ? ಬಿಗ್ ಬಾಸ್ ಮನೆಗಷ್ಟೇ ಕಾರ್ತಿಕ್- ಸಂಗೀತಾ ಪ್ರೀತಿ ಸೀಮಿತನಾ? ಹೀಗೆ ಹತ್ತು ಹಲವು ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದೆ. ಉತ್ತರಕ್ಕಾಗಿ ಮುಂದಿನ ದಿನಗಳವರೆಗೂ ಕಾಯಬೇಕಿದೆ.

