ನಾಗಬನದ ಬಳಿ ದನದ ಕಿವಿ ಸಹಿತ ಚರ್ಮ ಪತ್ತೆ

ಶೇರ್ ಮಾಡಿ

ಲಾೖಲ ಗ್ರಾಮದ ಬಜಕ್ರೆಸಾಲು ಸೇತುವೆಯ ಕೆಳಗೆ ನದಿಯಲ್ಲಿ ದನದ ಚರ್ಮ ಪತ್ತೆಯಾಗಿದೆ. ಸ್ಥಳೀಯರು ಈ ಜಾಗದಲ್ಲಿ ನಡೆದುಕೊಂಡು ಹೋಗುವಾಗ ಕೆಟ್ಟ ವಾಸನೆ ಬರುತ್ತಿದ್ದು, ಪರಿಶೀಲಿಸಿದಾಗ ಪೊದೆಗಳ ಮಧ್ಯೆ ದನದ ಕಿವಿ ಸಹಿತ ಚರ್ಮ ಪತ್ತೆಯಾಗಿತ್ತು.

ಸಮೀಪದಲ್ಲೇ ನಾಗ ಬನವೊಂದಿದ್ದು ಸ್ಥಳೀಯರು ಪೊಲೀಸ್‌ ಹಾಗೂ ಗ್ರಾಮ ಪಂಚಾಯತ್‌ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಯಾರೋ ಕಿಡಿಗೇಡಿಗಳು ದನದ ಮಾಂಸ ಮಾಡಿ ಉಳಿದ ಚರ್ಮ ಸೇರಿದಂತೆ ತ್ಯಾಜ್ಯವನ್ನು ಸೇತುವೆ ಮೇಲಿನಿಂದ ನದಿಗೆ ಬಿಸಾಡಿರಬಹುದು ಎಂದು ಶಂಕಿಸಲಾಗಿದೆ.

ಕೆಲವು ದಿನಗಳ ಹಿಂದೆ ಸವಣಾಲು ರಸ್ತೆ ಬದಿ ಚರಂಡಿಯಲ್ಲಿ ಮೂರು ಪ್ಲಾಸ್ಟಿಕ್‌ ಗೋಣಿಯಲ್ಲಿ ಇದೇ ರೀತಿ ತ್ಯಾಜ್ಯ ಕಂಡುಬಂದಿತ್ತು. ಎಲ್ಲೋ ಗೋ ಮಾಂಸ ಮಾಡಿ ಉಳಿದ ತ್ಯಾಜ್ಯವನ್ನು ಜನ ಸಂಚಾರ ಕಡಿಮೆ ಇರುವ ಸ್ಥಳಗಳಲ್ಲಿ ರಾತ್ರಿ ವೇಳೆ ಬಿಸಾಡುತ್ತಿರುವ ಬಗ್ಗೆ ಶಂಕಿಸಲಾಗಿದೆ.

Leave a Reply

error: Content is protected !!