ನೆಲ್ಯಾಡಿ: ಕಡಬ ತಾಲ್ಲೂಕಿನ ಕೌಕ್ರಾಡಿ ಗ್ರಾಮದ ಬಾಣಜಾಲು ನಿವಾಸಿ ದೇವದಾಸ್ ಬಾಣಜಾಲು ಎಂಬವರ ಭತ್ತದ ಗದ್ದೆಗೆ ಕಾಡಾನೆಗಳ ದಾಳಿ ಭತ್ತದ ಕೃಷಿ ಸಂಪೂರ್ಣ ನಾಶ.
ಕಳೆದ ಮೂರು ದಿನದಿಂದ ಕಾಡಾನೆಗಳು ಇವರ ಭತ್ತದ ಕೃಷಿಗೆ ದಾಳಿ ಮಾಡುತ್ತಿದ್ದು ಕೃಷಿಯು ಸಂಪೂರ್ಣ ಹಾನಿ ಉಂಟಾಗಿದೆ, ಅಲ್ಲದೆ ಕೃಷಿಗೆ ನೀರಾವರಿಗಾಗಿ ಅಳವಡಿಸಿದ ಪೈಪುಗಳು, ಪಂಪ್ ಶೆಡ್ ಗಳನ್ನು ದ್ವಂಸ ಮಾಡಿ ಅಪಾರ ನಷ್ಟ ಉಂಟಾಗಿದೆ.
ಕೃಷಿಕರಿಗೆ ಕಾಡಾನೆಗಳ ಹಾವಳಿಯಿಂದಾಗಿ ಭಯದಲ್ಲಿ ಬದುಕು ನಡೆಸುವಂತಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸುತ್ತಿದ್ದಾರೆ.
ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ನಷ್ಟ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ.