ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ‘ಬಾಲ್ಯ ವಿವಾಹ ನಿಷೇಧ’ ಮಾಹಿತಿ ಕಾರ್ಯಗಾರ

ಶೇರ್ ಮಾಡಿ

ಶ್ರೀರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಆಂದೋಲನದ ಭಾಗವಾಗಿ ಬಾಲ್ಯ ವಿವಾಹ ನಿಷೇಧ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವು ನಡೆಯಿತು.

ಈ ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದ ಕನ್ನಡ ವಿಭಾಗದ ಉಪನ್ಯಾಸಕಿಯಾದ ಶ್ರೀಮತಿ ಮಲ್ಲಿಕಾ ಇವರು “ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಪರಿಪೂರ್ಣವಾಗಿ ಬೆಳೆಯುವ ಮತ್ತು ಆನಂತರದಲ್ಲಿ ತನ್ನದೇ ಆದ ನಿರ್ಧಾರಗಳನ್ನ ತೆಗೆದುಕೊಳ್ಳುವ ಹಕ್ಕು ಇದೆ. ಬಾಲ್ಯ ವಿವಾಹವನ್ನು ಮಾಡಿದಾಗ ಒಬ್ಬ ವ್ಯಕ್ತಿಯು ಈ ರೀತಿಯಾದ ಹಕ್ಕಿನಿಂದ ವಂಚಿತನಾಗುತ್ತಾನೆ. ಅದಲ್ಲದೆ ವಯಸ್ಸಿಗೆ ಮೀರಿದಂತಹ ಜವಾಬ್ದಾರಿಯನ್ನ ಒಬ್ಬ ವ್ಯಕ್ತಿಯಲ್ಲಿ ಹೇರಿದಾಗ ಆ ವ್ಯಕ್ತಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಯನ್ನು ಖಂಡಿತವಾಗಿಯೂ ಅನುಭವಿಸುತ್ತಾನೆ. ಬಾಲ್ಯ ವಿವಾಹವು ಇಂತಹ ಎಲ್ಲ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳೆಲ್ಲರೂ ಕೂಡ ಸ್ವಯಂ ಜಾಗೃತಿಯಿಂದ ಇದ್ದು ಇತರರಲ್ಲಿಯೂ ಕೂಡ ಜಾಗೃತಿಯನ್ನು ಮೂಡಿಸಬೇಕು” ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಚಂದ್ರಶೇಖರ್.ಕೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Leave a Reply

error: Content is protected !!