ಬಿಗ್‌ ಬಾಸ್ ಮನೆಯಲ್ಲಿ‌ ಮಗಳ ಸರಸ.. ಬೇಸತ್ತ ಪೋಷಕರು ‘ಶೋ ನಿಂದ ಹೊರಹಾಕಿ’ ಅಂದ್ರು!

ಶೇರ್ ಮಾಡಿ

ಬಿಗ್‌ ಬಾಸ್‌ 17 ರ ಹಿಂದಿ ರಿಯಾಲಿಟಿ ಶೋ ಸ್ಪರ್ಧಿ ಇಶಾ ಮಾಳವಿಯಾ ಅವರ ಸಂಬಂಧದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಇಶಾ ಮಾಳವಿಯಾ ಪ್ರೇಮ ಪುರಾಣ ಅವರ ಪೋಷಕರ ಕೋಪಕ್ಕೂ ಕಾರಣವಾಗಿದೆ. 20 ವರ್ಷದ ಹರೆಯದ ಇಶಾ ಮಾಳವಿಯಾ ಬಿಗ್ ಬಾಸ್ 17 ರ ಸ್ಪರ್ಧಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇಶಾ ಅವರ ಮಾಜಿ ಹಾಗೂ ಹಾಲಿ ಇಬ್ಬರೂ ಬಾಯ್‌ಫ್ರೆಂಡ್ಸ್‌ ಇದ್ದಾರೆ. ಈಗ ಇಶಾ ತನ್ನ ಹಾಲಿ ಪ್ರಿಯತಮನ ವಿಚಾರವಾಗಿ ಸುದ್ದಿಯಾಗಿದ್ದಾರೆ.

ಇವರಿಬ್ಬರ ವರ್ತನೆ ಬಿಗ್‌ ಬಾಸ್‌ ವೀಕ್ಷಕರ ಕೋಪಕ್ಕೆ ಕಾರಣವಾಗಿದೆ. ಇಬ್ಬರೂ ಒಂದೇ ಬೆಡ್‌ನಲ್ಲಿ ಮಲಗುವುದು. ಅಸಭ್ಯವಾಗಿ ವರ್ತಿಸುತ್ತಿರುವುದು ನೋಡುಗರಿಗೆ ಬೇಸರ ತರಿಸಿದೆ. ಇಶಾ ಅವರ ತಂದೆ – ತಾಯಿ ಕೂಡ ಈ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಮ್ಮ ಸುತ್ತಲೂ ಕ್ಯಾಮರಾ ಕಣ್ಗಾವಲು ಇದೆ ಅನ್ನೋದನ್ನೂ ಮರೆತ ಈ ಜೋಡಿ ಸರಸವಾಡುವ ವಿಡಿಯೋ, ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಇಶಾ ಮಾಳವಿಯಾ ಅವರು ಪ್ರಿಯತಮ ಸಮರ್ಥ್ ಜ್ಯುರೆಲ್ ಜೊತೆ ಅಸಭ್ಯವಾಗಿ ವರ್ತಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆ ಆಗಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಸಮರ್ಥ್ ಹಾಗೂ ಇಶಾ ಅವರ ಅಸಭ್ಯ ವರ್ತನೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇಶಾ ಅವರ ಜೊತೆ ಧಾರಾವಾಹಿಯೊಂದರಲ್ಲಿ ನಟಿಸಿದ್ದ ಲಕ್ಷ್ಯ ಭತ್ರಾ ಈ ಬಗ್ಗೆ ಮಾತನಾಡಿದ್ದಾರೆ. ಇಶಾ ತಾಯಿ ಈ ವಿಚಾರದಿಂದ ತುಂಬ ನೋವು ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ಇಶಾ ಬಿಗ್‌ ಬಾಸ್‌ ನಿಂದ ಹೊರ ಬರಲಿ ಎನ್ನುತ್ತಿದ್ದಾರೆ. ಸಮರ್ಥ್ ಬಿಗ್ ಬಾಸ್ ಗೆ ಹೋದ ನಂತರ ನಮಗೆ ಶೋ ನೋಡಲು ಆಗುತ್ತಿಲ್ಲ ಎಂದು ಇಶಾ ಅವರ ತಾಯಿ ಹೇಳಿದ್ದಾಗಿ ಲಕ್ಷ್ಯ ಭತ್ರಾ ತಿಳಿಸಿದ್ದಾರೆ.

Leave a Reply

error: Content is protected !!
%d