2 ವರ್ಷಗಳಿಂದ ಜಿ-ಮೇಲ್‌ ಅಕೌಂಟ್‌ನಲ್ಲಿ ನೀವು ಆ್ಯಕ್ಟಿವ್‌ ಆಗಿಲ್ವಾ? – ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ..

ಶೇರ್ ಮಾಡಿ

ಗೂಗಲ್‌ ಕಂಪನಿ ತನ್ನ ಸುರಕ್ಷತಾ ನಿಯಮಗಳನ್ನು ಅಪ್‌ಡೇಟ್‌ ಮಾಡಿದ್ದು, ಜಿ-ಮೇಲ್‌ ಖಾತೆ ಹೊಂದಿದ್ದು, ಸಕ್ರಿಯರಾಗಿಲ್ಲದವರಿಗೆ ಶಾಕಿಂಗ್‌ ನ್ಯೂಸ್‌ ಕೊಟ್ಟಿದೆ.

ಹೌದು, 2 ವರ್ಷ ಬಳಸದೇ ಇರುವ ಜಿ-ಮೇಲ್‌ ಖಾತೆಗಳನ್ನು ಡಿಸೆಂಬರ್‌ನಲ್ಲಿ ಬಂದ್‌ ಮಾಡಲಾಗುವುದು ಎಂದು ತಿಳಿಸಿದೆ. ಹೀಗಾಗಿ ಒಮ್ಮೆ ಲಾಗಿನ್‌ ಆಗಿ ಖಾತೆ ಉಳಿಸಿಕೊಳ್ಳಿ ಎಂಬ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದೆ.

ಗೂಗಲ್‌ ಕಂಪನಿಯು ಸುರಕ್ಷತಾ ನಿಯಮಗಳನ್ನು ಕಳೆದ ಮೇ ತಿಂಗಳಲ್ಲಿ ಅಪ್‌ಡೇಟ್‌ ಮಾಡಿತ್ತು. ಆಗಲೇ ಅದರ ಉಪಾಧ್ಯಕ್ಷೆ ರೂತ್‌ ಕ್ರಿಚೇಲ್‌, ಮುಂಬರುವ ಡಿಸೆಂಬರ್‌ನಲ್ಲಿ ಕಳೆದ 2 ವರ್ಷಗಳಿಂದ ಒಮ್ಮೆಯೂ ಲಾಗಿನ್‌ ಮಾಡದ ಅಥವಾ ಬಳಕೆ ಮಾಡದ ವೈಯಕ್ತಿಕ ಗೂಗಲ್‌ ಖಾತೆಗಳನ್ನು ಡಿಲೀಟ್‌ ಮಾಡಲು ಆರಂಭಿಸುತ್ತೇವೆ ಎಂದು ತಿಳಿಸಿದ್ದರು. ಮುಂದಿನ ಎರಡು ವರ್ಷಗಳಲ್ಲಿ ಕನಿಷ್ಠ ಬಳಕೆ ಮಾಡದ ಖಾತೆಗಳನ್ನು ನಿರಂತರವಾಗಿ ರದ್ದುಪಡಿಸುತ್ತೇವೆ ಎಂದು ಸೂಚನೆ ನೀಡಿದ್ದಾರೆ.

ನಿಯಮದ ಪ್ರಕಾರ, ವೈಯಕ್ತಿಕ ಗೂಗಲ್‌ ಖಾತೆಗಳು (ಜಿ-ಮೇಲ್‌, ಡಾಕ್ಸ್‌, ಡ್ರೈವ್‌, ಮೀಟ್‌, ಕ್ಯಾಲೆಂಡರ್‌, ಗೂಗಲ್‌ ಫೋಟೋಸ್‌ ಇತ್ಯಾದಿ) ಮಾತ್ರ ಡಿಲೀಟ್‌ ಆಗಲಿವೆ. ಸಾಂಸ್ಥಿಕ ಅಂದರೆ ಕಂಪನಿಗಳು ಅಥವಾ ಶಾಲೆ ಇತ್ಯಾದಿ ಸಂಸ್ಥೆಗಳು ಹೊಂದಿರುವ ಗೂಗಲ್‌ ಖಾತೆಗಳು ಡಿಲೀಟ್‌ ಆಗುವುದಿಲ್ಲ.

ಮರೆತ, ಬಳಸದ ಖಾತೆಗಳು ಗೂಗಲ್‌ ಅಥವಾ ಖಾತೆದಾರರಿಗೆ ಅಪಾಯ ತರಬಹುದು ಎಂಬ ಕಾರಣಕ್ಕೆ ಡಿಲೀಟ್‌ ಮಾಡಲು ಗೂಗಲ್‌ ಮುಂದಾಗಿದೆ. ಜಿ-ಮೇಲ್‌ ಅಕೌಂಟ್‌ಗಳು ಡಿಲೀಟ್‌ ಆಗಬಾರದು ಎನ್ನುವವರು ಕಳೆದ 2 ವರ್ಷಗಳಿಂದ ಖಾತೆ ಬಳಸದಿದ್ದರೆ ಲಾಗಿನ್‌ ಆಗಬೇಕಿದೆ.

Leave a Reply

error: Content is protected !!
%d