ಚಾರ್ಮಾಡಿ-ಕನಪಾಡಿ ಅರಣ್ಯದ ಕಡೆ ಒಂಟಿ ಸಲಗದ ಸಂಚಾರ

ಶೇರ್ ಮಾಡಿ

ನಾವೂರಿನಲ್ಲಿ ಶುಕ್ರವಾರ ಸಂಜೆ ಕಂಡುಬಂದಿದ್ದ ಒಂಟಿ ಸಲಗವು ಸುಮಾರು 15 ಕಿ.ಮೀ.ಗಿಂತ ಅಧಿಕ ಪ್ರದೇಶದಲ್ಲಿ ಸಂಚರಿಸಿ ಶನಿವಾರ ಸಂಜೆಯ ವೇಳೆಗೆ ಚಾರ್ಮಾಡಿ-ಕನಪಾಡಿ ಅರಣ್ಯದತ್ತ ಸಾಗಿದೆ.

ಒಂಟಿ ಸಲಗವು ಇಂದಬೆಟ್ಟು ಮೈಂದಡ್ಕ, ಬಲ್ಲಾಳಬೆಟ್ಟು, ಹೇಡ್ಯ ಕಾನರ್ಪ ಮೊದಲಾದ ಕಡೆಗಳ ಜನ ವಾಸ್ತವ್ಯ ಇರುವ ಹಾಗೂ ತೋಟಗಳ ಬದಿಯಿಂದ ಸಾಗಿ ಕಡಿರುದ್ಯಾವರದಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ಚಾರ್ಮಾಡಿ-ಕನಪಾಡಿ ಅರಣ್ಯದ ಕಡೆ ಸಾಗಿತು.

ಕಡಿರುದ್ಯಾವರ ಗ್ರಾಮದ ಲಿಜೋ ಸ್ಕರಿಯ ಅವರ ತೋಟದಲ್ಲಿ ತೆಂಗಿನ ಗಿಡಕ್ಕೆ, ಪರಿಸರದ ಕೃಷಿಕರ ಬಾಳೆ ಗಿಡಗಳಿಗೆ ಸ್ವಲ್ಪ ಹಾನಿ ಮಾಡಿದೆ.

ಈ ಒಂಟಿ ಸಲಗ ಇಲ್ಲಿನ ಪ್ರದೇಶಗಳಲ್ಲಿ ವರ್ಷಕೊಮ್ಮೆ ಸಂಚರಿಸುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

Leave a Reply

error: Content is protected !!