‘ಸೇವ್ ಆದರೂ ಹೊರಹೋಗ್ತೀನಿ ಎಂದ ಸಂತೋಷ್’; ಇದು ಸಾಧ್ಯವಿಲ್ಲ ಎಂದು ವೇದಿಕೆಯಿಂದ ಹೊರನಡೆದ ಸುದೀಪ್

ಶೇರ್ ಮಾಡಿ

ವರ್ತೂರು ಸಂತೋಷ್ ಅವರು ಹುಲಿ ಉಗುರು ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ದೊಡ್ಮನೆಯಲ್ಲಿ ಇದ್ದಾಗಲೇ ಅವರನ್ನು ಬಂಧಿಸಲಾಯಿತು. ಇದು ಅವರಿಗೆ ಶಾಕ್ ತಂದಿತ್ತು. ಆದರೆ, ಒಂದು ವಾರದ ಬಳಿಕ ದೊಡ್ಮನೆಗೆ ಮರಳಿದರು. ಬಿಗ್ ಬಾಸ್​ಗೆ ಬಂದ ಬಳಿಕ ಅವರು ಬದಲಾಗಿದ್ದಾರೆ. ದೊಡ್ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಯಾರ ಬಗ್ಗೆ ಅವರಿಗೆ ಹೆಚ್ಚು ಒಲವು ಇದೆ ಅನ್ನೋದು ಗೊತ್ತಾಗಿದೆ. ಅಚ್ಚರಿ ಎಂದರೆ ಈ ವಾರ ಅವರು ತಾವು ಹೊರ ಹೋಗುವುದಾಗಿ ಹೇಳಿದ್ದಾರೆ. ಆದರೆ, ಇದಕ್ಕೆ ಸುದೀಪ್ ಒಪ್ಪಿಗೆ ಕೊಟ್ಟಿಲ್ಲ.

ವರ್ತೂರು ಸಂತೋಷ್ ಅವರು ದೊಡ್ಮನೆಯಿಂದ ಹೊರಗೆ ಹೋಗಿದ್ದು ಏಕೆ ಎಂಬುದು ಬಿಗ್ ಬಾಸ್​ನಲ್ಲಿ ಇರುವ ಯಾರಿಗೂ ತಿಳಿದಿಲ್ಲ. ಈ ವಾರ ಅವರು ನಾಮಿನೇಟ್ ಆಗಿದ್ದರು. ವರ್ತೂರು ಸಂತೋಷ್ ನೀವು ಸೇವ್ ಆಗಿದ್ದೀರಿ ಎಂದು ಸುದೀಪ್ ಹೇಳುತ್ತಿದ್ದಂತೆ ವರ್ತೂರು ಭಾವುಕರಾದರು. ಈ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

‘ಹೊರಗೆ ಒಂದು ಘಟನೆ ನಡೆದಿದೆ. ಅದರಿಂದ ಹೊರ ಬಂದು ನಾನು ಇಲ್ಲಿ ಆಡಬೇಕು ಎಂದರೆ ಕಷ್ಟ ಆಗ್ತಿದೆ’ ಎಂದು ಕಣ್ಣೀರು ಹಾಕಿದರು ವರ್ತೂರು ಸಂತೋಷ್. ಜೊತೆಗೆ ನಾನು ಹೊರಗೆ ಹೋಗ್ತೀನಿ ಎಂದು ಹಠ ಹಿಡಿದರು. ‘ನಿಮಗೆ ಬಂದಿರೋ ಮತಗಳ ಸಂಖ್ಯೆ 34 ಲಕ್ಷ. ಜನರ ಅಭಿಪ್ರಾಯದ ವಿರುದ್ಧ ನಾನು ಹೋಗಲ್ಲ’ ಎಂದು ಸುದೀಪ್ ಅವರು ವೇದಿಕೆಯಿಂದಲೇ ಹೊರ ನಡೆದಿದ್ದಾರೆ. ಈ ಪ್ರೋಮೋ ಗಮನ ಸೆಳೆಯುತ್ತಿದೆ.

ವೀಕೆಂಡ್​ನಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಅತೀ ಕಡಿಮೆ ವೋಟ್ ಬಿದ್ದವರು ದೊಡ್ಮನೆಯಿಂದ ಹೊರ ಹೋಗುತ್ತಾರೆ. ಈ ವಾರ ಅನೇಕರು ನಾಮಿನೇಟ್ ಆಗಿದ್ದರು. ಈ ಪೈಕಿ ನಮ್ರತಾ ಹಾಗೂ ಕಾರ್ತಿಕ್ ಮಹೇಶ್ ಸೇವ್ ಆಗಿದ್ದಾರೆ. ಭಾನುವಾರದ ಎಪಿಸೋಡ್​ನಲ್ಲಿ ವರ್ತೂರು ಸಂತೋಷ್ ಕೂಡ ಸೇವ್ ಆದರು. ಆದರೆ, ಇದನ್ನು ಅವರು ಒಪ್ಪಿಕೊಳ್ಳೋಕೆ ರೆಡಿ ಇಲ್ಲ. ಅವರಿಗೆ ಹೊರಬರಲೇಬೇಕು ಎಂದೆನಿಸಿದೆ.

Leave a Reply

error: Content is protected !!