ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಫೋಟೋ ಎಡಿಟ್​ ಮಾಡಿ ಬ್ಯ್ಲಾಕ್​ಮೇಲ್

ಶೇರ್ ಮಾಡಿ

ಪ್ರೀತಿ ನಿರಾಕರಿಸಿದ್ದಕ್ಕೆ ಡೀಪ್​ ಫೇಕ್ ಮೂಲಕ ಯಾರದೋ ನಗ್ನ ದೇಹಕ್ಕೆ ಯುವತಿಯ ಭಾವಚಿತ್ರ ಅಳವಡಿಸಿ ಯುವಕ ಬ್ಯ್ಲಾಕ್​ಮೇಲ್ ಮಾಡಿರುವ ಘಟನೆ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದಿದೆ. ಫೋಟೋ ಎಡಿಟ್​ ಮಾಡಿ ಬ್ಯ್ಲಾಕ್​ಮೇಲ್​ ಮಾಡಿದ್ದ ಆರೋಪಿ ಮಂಥನ್ ಪಾಟೀಲ್​ (22)​ನನ್ನು ಖಾನಾಪುರ ಪೊಲೀಸರು ಬಂಧಿಸಿದ್ದಾರೆ. ಯುವತಿ ಮತ್ತು ಆರೋಪಿ ಮಂಥನ್ ಪಾಟೀಲ್ ಒಂದೇ ಊರವನರಾಗಿದ್ದಾರೆ. ಮಂಥನ್ ಪಾಟೀಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಮಂಥನ್​ ಪಾಟೀಲ್​​ ಯುವತಿಗೆ ಪ್ರೀತಿ ಮಾಡುವಂತೆ ಬೆನ್ನು ಬಿದ್ದಿದ್ದನು.

ಆದರೆ ಯುವತಿ ಈತನ ಲವ್​ ಪ್ರಪೋಸಲ್​ಗೆ ಒಪ್ಪಿರಲಿಲ್ಲ. ಹೀಗಾಗಿ ಆರೋಪಿ ಮಂಥನ್​ ಪಾಟೀಲ್​, ಸಾಮಾಜಿಕ ಜಾಲತಾಣದಿಂದ ಯುವತಿಯ ಫೋಟೋ ತೆಗೆದುಕೊಂಡು ನಗ್ನವಾಗಿ ಎಡಿಟ್​ ಮಾಡಿ ವೈರಲ್​ ಮಾಡುತ್ತೇನೆ ಎಂದು ಬ್ಲ್ಯಾಕ್​​ಮೇಲ್​ ಮಾಡಿದ್ದಾನೆ. ಆದರೂ ಯುವತಿ ಪ್ರೀತಿ ಮಾಡಲು ಒಪ್ಪಿರುವುದಿಲ್ಲ. ಯುವತಿಯ ಮೇಲೆ ಮತ್ತಷ್ಟು ಒತ್ತಡ ಹಾಕಲು ಆರೋಪಿ ಮಂಥನ್​ ಪಾಟೀಲ್​ ಯುವತಿ ಮತ್ತು ಆಕೆಯ ಗೆಳತಿಯರು ಒಟ್ಟಿಗೆ ಇರುವ ಭಾವಚಿತ್ರ ತೆಗೆದುಕೊಂಡು ಯಾರದ್ದೋ ನಗ್ನ ಭಾವಚಿತ್ರಕ್ಕೆ ಇವರ ಮುಖವನ್ನು ಅಳವಡಿಸುತ್ತಾನೆ.

ನಂತರ ಅಂತಾ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಎಡಿಟ್​ ಮಾಡಿದ್ದ ಯುವತಿಯರ ಭಾವಚಿತ್ರವನ್ನು ಅಪ್ಲೋಡ್​ ಮಾಡುತ್ತಾನೆ. ಕೂಡಲೆ ಯುವತಿಯರು ಖಾನಾಪುರ ಪೊಲೀಸರಿಗೆ ದೂರು ನೀಡುತ್ತಾರೆ. ಅಲ್ಲದೆ ಯುವತಿಯರು ಮತ್ತು ಕುಟುಂಬಸ್ಥರು ಪೊಲೀಸ್ ಠಾಣೆ ಎದುರು ಧರಣಿ ಕೂಡ ನಡೆಸಿದ್ದರು. ದೂರಿನನ್ವಯ ಖಾನಾಪುರ ಪೊಲೀಸರು ಆರೋಪಿ ಮಂಥನ್​​ ಪಾಟೀಲ್​ನನ್ನು ಬಂಧಿಸಿದ್ದಾರೆ.

Leave a Reply

error: Content is protected !!