ವರ್ತೂರ್ ಸಂತೋಷ್‌ಗೆ ಮದ್ವೆ ಅಗಿದ್ಯಾ?; ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್!

ಶೇರ್ ಮಾಡಿ

ಕಲರ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿರುವ ಹಳ್ಳಿಕಾರ್ ವರ್ತೂರ್ ಸಂತೋಷ್ ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಉಳಿಯುವುದಿಲ್ಲ ಎಂದು ಹಠ ಮಾಡುತ್ತಿದ್ದಾರೆ. ಸುಮಾರು 34 ಲಕ್ಷ ವೋಟ್ ಪಡೆದಿದ್ದರೂ ನಾನು ಆಟ ಆಡುವುದಿಲ್ಲ ಹೊರ ನಡೆಯಬೇಕು ಎನ್ನುತ್ತಿದ್ದಾರೆ. ಹೀಗೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್ ಕೊಡುತ್ತಿರುವ ವರ್ತೂರ್ ಸಂತೋಷ್ ವೈಯಕ್ತಿಕ ಜೀವನದ ಮತ್ತೊಂದು ವಿಚಾರ ಹೊರಗಡೆ ವೈರಲ್ ಆಗುತ್ತಿದೆ.

ಹೌದು! 27 ವರ್ಷ ವರ್ತೂರ್ ಸಂತೋಷ್ ಈಗಾಗಲೆ ಮದುವೆ ಮಾಡಿಕೊಂಡಿದ್ದಾರೆ ಎಂದು ಹುಡುಗಿ ಜೊತೆಗಿರುವ ಫೋಟೋ ಟ್ರೋಲ್ ಪೇಜ್‌ಗಳಲ್ಲಿ ವೈರಲ್ ಆಗುತ್ತಿದೆ. ಇದುವರೆಗೂ ಬಿಗ್ ಬಾಸ್ ಮನೆಯಲ್ಲಿ ಸಂತೋಷ್ ಯಾವುದೇ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿಲ್ಲ. ಹೀಗಾಗಿ ಮದುವೆ ಆಗಿದ್ಯಾ ಇಲ್ವಾ ಅನ್ನೋದು ಯಾರಿಗೂ ಕ್ಲಾರಿಟಿ ಇಲ್ಲ. ಸದ್ಯ ಮದುವೆ ಆಗುತ್ತಿರುವ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗ್ತಿದ್ದಾರೆ. ಇದೇನಪ್ಪ ಹಳ್ಳಿಕಾರ್ ಒಡೆಯ ಮದುವೆ ಆಗಿದ್ದಾರೆ ಯಾರಿಗೂ ಹೇಳಿಲ್ಲ ಗೊತ್ತಿಲ್ಲ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.

ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದ ರಕ್ಷಕ್ ಬುಲೆಟ್‌ ವರ್ತೂರ್ ನಿಶ್ಚಿತಾರ್ಥದ ಬಗ್ಗೆ ಸುಳಿವು ಕೊಟ್ಟರು. ‘ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವುದು ಕಾಮಿಡಿ ಅಷ್ಟೆ. ಸಂತೋಷ್ ಮದುವೆಯಾಗುತ್ತಿರುವ ಹುಡುಗಿ ನೋಡುತ್ತಿದ್ದರೆ. ದಯವಿಟ್ಟು ಕ್ಷಮಿಸಿ ಕಾಮಿಡಿಗೋಸ್ಕರ ನಾವು ರೇಗಿಸಿಕೊಂಡು ಮಾತನಾಡುತ್ತಿದೆವು. ತನಿಷಾ ತೊಡೆ ಮೇಲೆ ಸಂತೋಷ್ ಮಲಗಿಕೊಂಡಾಗ ಅಥವಾ ಸಂತೋಷ್ ತೊಡೆ ಮೇಲೆ ತನಿಷಾ ಕುಳಿತುಕೊಂಡಾಗ ಅದು ಹೊರಗಡೆ ಮತ್ತೊಂದು ರೀತಿ ಕಾಣಿಸುತ್ತದೆ ತಪ್ಪಾಗಿ ತಿಳಿದುಕೊಳ್ಳುತ್ತಾರೆಂದು ನಾನೇ ವರ್ತೂರ್ ಅವರಿಗೆ ಹಲವು ಸಲ ಹೇಳಿದ್ದೀನಿ. ವೀಕೆಂಡ್‌ನಲ್ಲಿ ನಡೆದ ಬೆಂಕಿಯ ಬಲೆ ಸಿನಿಮಾ ಪೋಸ್ಟ್‌ ವೈರಲ್ ಆಯ್ತು ವೀಕೆಂಡ್‌ನಲ್ಲಿ ಡ್ಯಾನ್ಸ್‌ ಮಾಡಿದರೂ ಅದು ವೈರಲ್ ಆಗಿರುತ್ತದೆ. ಒಳ್ಳೆಯದಾಗಲಿ’ ಎಂದು ರಕ್ಷಕ್ ಬುಲೆಟ್ ಹೇಳಿದ್ದಾರೆ.

Leave a Reply

error: Content is protected !!
%d