ಬೆಳ್ತಂಗಡಿ: ಚಿತ್ಪಾವನ ಸಂಘಟನೆ: ದೀಪಾವಳಿ ಸಂಭ್ರಮ

ಶೇರ್ ಮಾಡಿ

ಬೆಳ್ತಂಗಡಿ: ಮುಂಡಾಜೆ ಚಿತ್ಪಾವನ ಸಂಘಟನೆ ವತಿಯಿಂದ ಇಲ್ಲಿನ ಶ್ರೀಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ವಠಾರದಲ್ಲಿ ದೀಪಾವಳಿ ಸಂಭ್ರಮ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರಗಿತು.

ಬೆಂಗಳೂರಿನ ಉದ್ಯಮಿ ರಾಜೇಶ್ ಫಡಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ “ನಮ್ಮ ಸಂಪ್ರದಾಯ ಸಂಸ್ಕೃತಿಗಳನ್ನು ಎತ್ತಿ ಹಿಡಿಯಲು ಸಮಾಜ ಬಾಂಧವರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಲ್ಲರೂ ಒಂದುಗೂಡಿ ಹಬ್ಬವನ್ನು ಆಚರಿಸುತ್ತಿರುವುದು ಮಾದರಿಯಾಗಿದೆ. ಯುವ ಜನತೆ ಇಂತಹ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಸಂಪ್ರದಾಯಗಳಿಗೆ ಹೆಚ್ಚಿನ ಬಲ ಸಿಗುತ್ತದೆ ಎಂದರು.

ಸಂಘಟನೆಯ ಅಧ್ಯಕ್ಷೆ ಸುಷ್ಮಾ ಭಿಡೆ ಮಾತನಾಡಿ “ಆಧುನಿಕತೆಯ ಮಧ್ಯೆ ಹಬ್ಬಗಳ ಇತಿಹಾಸ ಮರೆಯಾಗಬಾರದು ಹಿರಿಯರು ಆಚರಿಸಿಕೊಂಡು ಬಂದಿರುವ ಎಲ್ಲಾ ಪದ್ಧತಿಗಳ ಹಿಂದೆ ಅನೇಕ ವೈಜ್ಞಾನಿಕ ಕಾರಣಗಳು ಇವೆ. ಇಂದಿನ ದಿನಗಳ ಒತ್ತಡದ ಬದುಕಿನ ಮಧ್ಯೆ ಹಬ್ಬಗಳ ಮಹತ್ವವನ್ನು ಸಾರುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದರು.

ಸಂಘಟನೆಯ ಪದಾಧಿಕಾರಿಗಳಾದ ವಾಸುದೇವ ಗೋಖಲೆ, ಪ್ರಹ್ಲಾದ್ ಫಡಕೆ, ಶ್ರೀನಿವಾಸ ಕಾಕತ್ಕರ್, ಜಗದೀಶ ಫಡಕೆ, ಅಶ್ವಿನಿ ಹೆಬ್ಬಾರ್, ರಂಗನಾಥ ಹೆಬ್ಬಾರ್, ದಿಶಾ ಪಟವರ್ಧನ್, ದಿವ್ಯಾ ಆರ್.ಭಟ್, ದಿವಾಕರ ಫಡಕೆ, ಪ್ರಶಾಂತ ಕಾಕತ್ಕರ್,ಶಶಿಧರ ಠೋಸರ್, ಮತ್ತಿತರರು ಉಪಸ್ಥಿತರಿದ್ದರು.

ಚಿತ್ರಾ ಭಿಡೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ರಸಪ್ರಶ್ನೆ,ಭಕ್ತಿಗೀತೆ, ಚಿತ್ರಕಲೆ ಸ್ಪರ್ಧೆ, ಜಾನಪದ ನೃತ್ಯ, ಸಾಂಪ್ರದಾಯಿಕ ತಿಂಡಿ ತಯಾರಿ ಇತ್ಯಾದಿ ಸ್ಪರ್ಧೆಗಳು ಜರಗಿದವು. ಮಹಿಳೆಯರು ಸಂಪ್ರದಾಯ ಆಚರಣೆ ಹಿನ್ನೆಲೆಯಲ್ಲಿ ಸಾಲು ದೀಪಗಳನ್ನು ಬೆಳಗಿಸಿದರು.

Leave a Reply

error: Content is protected !!
%d