ಕಿರಿಯಪ್ರಾಯದಲ್ಲಿ ವಿಶೇಷ ಸಾಧನೆಗೈದ ನೆಲ್ಯಾಡಿಯ ಪ್ರತಿಭಾನ್ವಿತ ಸಹೋದರಿಯರು

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿನ ಸಂತ ತೋಮಸರ ದೇವಾಲಯದ ವಿಕಾರ್ ಆಗಿರುವ ಅನೀಶ್ ಪಾರಶೇರಿಲ್ ಹಾಗೂ ಸೌಮ್ಯಅನೀಶ್ ದಂಪತಿಗಳ ಹಿರಿಯ ಮಗಳಾದ ಸಿಯೋನ ಅನೀಶ್ ಹಾಗೂ ಕಿರಿಯ ಮಗಳಾದ ನಿಹಾನ ಅನೀಶ್ ಸಹೋದರಿಯರು ಭಾಷಣ, ವೈಯುಕ್ತಿಕ ಸಂಗೀತ ಸ್ಪರ್ಧೆಯಲ್ಲಿ ಮೂರು ಹಂತಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ, ವೈಯುಕ್ತಿಕ ಚಾಂಪಿಯನ್ ಶಿಪ್ ಗಳಿಸಿದ್ದರು.

ನಂತರ ಮಂಗಳೂರು ಡೈರೆಕ್ಟರೇಟ್ ಹಂತದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಇಲ್ಲೂ ಇಬ್ಬರು ಸಹೋದರಿಯರು ವೈಯುಕ್ತಿಕ ಚಾಂಪಿಯನ್ ಶಿಪ್ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಈ ಇಬ್ಬರು ಸಹೋದರಿಯರು ಸುದಾನ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು ಅಲ್ಲಿಯೂ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಅಧ್ಯಾಪಕರ ಹಾಗೂ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Leave a Reply

error: Content is protected !!