ನೆಲ್ಯಾಡಿ: ಕಾಲು ಜಾರಿ ಹೊಳೆಗೆ ಬಿದ್ದು ನೀರು ಪಾಲಾದ ವ್ಯಕ್ತಿ ಶವ ಪತ್ತೆ

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿನ ಗುಂಡ್ಯ ಸಮೀಪದ ಕೆಂಪು ಹೊಳೆ ಬರ್ಚಿನಹಳ್ಳ ಎಂಬಲ್ಲಿ ಸ್ನಾನಮಾಡಲೆಂದು ತೆರಳಿದ ವ್ಯಕ್ತಿ ನೀರಿನಲ್ಲಿ ಬಿದ್ದು ಮೃತಪಟ್ಟ ಘಟನೆ ನವೆಂಬರ್ 15 ರಂದು ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಸಿರಿಬಾಗಿಲು ಗ್ರಾಮದ ರೆಂಜಾಳ ನಿವಾಸಿ ಸೋಮಶೇಖರ (34.ವ) ಎಂದು ಗುರುತಿಸಲಾಗಿದೆ.

ಸೋಮಶೇಖರ ಮತ್ತು ಆತನ ಪತ್ನಿ ಹಾಗೂ ಅವರ ಮಕ್ಕಳು, ಮಾವ ಬಾಲಕೃಷ್ಣ, ಅತ್ತೆ ಲತಾಂಜಲಿ ಎಂಬವರೊಂದಿಗೆ ನ.14ರಂದು ಗಡಿ ದೇವಸ್ಥಾನಕ್ಕೆ ಹೋಗಿ ವಾಪಾಸು ಬರುತ್ತಾ ಶಿರಾಡಿ ಗ್ರಾಮದ ಬರ್ಚಿನ ಹಳ್ಳ ಎಂಬಲ್ಲಿ ಹರಿಯುತ್ತಿರುವ ಕೆಂಪು ಹೊಳೆ ಎಂಬಲ್ಲಿ ವಾಹನವನ್ನು ನಿಲ್ಲಿಸಿ ಸೋಮಶೇಖರ ಸ್ನಾನಮಾಡಲೆಂದು ಹೊಳೆಯ ಬದಿಯಲ್ಲಿರುವ ಕಲ್ಲಿನ ಮೇಲೆ ನಡೆದುಕೊಂಡು ಹೊಗುತ್ತಿದ್ದಾಗ ಸಮಯ ಸಂಜೆ 4.45 ಗಂಟೆಯ ವೇಳೆಗೆ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದು.

ಸ್ಥಳಕ್ಕೆ ಪರಶುರಾಮ ಕ್ರೇನ್ ತಂಡದ ಸದಸ್ಯರು, ಶೌರ್ಯ ತಂಡದ ಸದಸ್ಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಇದೀಗ ನ.15ರ ಮದ್ಯಾಹ್ನ 12.15 ಗಂಟೆಗೆ ಸೋಮಶೇಖರನ ಮೃತ ದೇಹ ಬಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿಯೇ ಪತ್ತೆಯಾಗಿದೆ.

ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!