ತಾನೇ ಕೊಲೆ ಮಾಡಿರುವುದಾಗಿ ತಪೊಪ್ಪಿಕೊಂಡ ಪ್ರವೀಣ್ – ಕೊಲೆಗೆ ಮೂರು ಕಾರಣ ಎಂದ ಆರೋಪಿ

ಶೇರ್ ಮಾಡಿ

ಉಡುಪಿಯಲ್ಲಿ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಉಡುಪಿ ಎಸ್‌ಪಿ ಡಾ.ಅರುಣ್ ಕೆ ಹೇಳಿಕೆ ನೀಡಿದ್ದಾರೆ.

ಪ್ರಕರಣದ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಪ್ರವೀಣ್ ಚೌಗಲೆ ಕೊಲೆಯನ್ನು ಒಪ್ಪಿಕೊಂಡಿದ್ದಾರೆ. ಕೊಲೆಗೆ ಕಾರಣವನ್ನು ವಿಚಾರಣೆಯಲ್ಲಿ ಪಡೆದುಕೊಳ್ಳುತ್ತೇವೆ. ಕೊಲೆಗೆ ಮೂರ್ನಾಲ್ಕು ಕಾರಣಗಳು ಇರುವ ಸಾಧ್ಯತೆ ಇದೆ. ಸಂಪೂರ್ಣ ತನಿಖೆ ಮಾಡದೆ ಕಾರಣ ಹೇಳಲು ಸಾಧ್ಯವಿಲ್ಲ. ಆರೋಪಿ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದಾನೆ. ಅವನ ಉದ್ದೇಶ ಅಯ್ನಾಝ್ ಕೊಲೆ ಮಾಡುವುದಾಗಿತ್ತು. ತಪ್ಪಿಸಿಕೊಳ್ಳಲು ಎಲ್ಲರನ್ನೂ ಕೊಲೆ ಮಾಡಿದ್ದಾನೆ. ಕೊಲೆ ಸಾಕ್ಷಿ ನಾಶ ಮಾಡಲು ಮೂವರ ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆ ಮಾಡಲು ಮೂರು ನಾಲ್ಕು ಕಾರಣ ಇರುವ ಸಾಧ್ಯತೆಗಳಿವೆ. ತನಿಖೆಯಿಂದ ಸಂಪೂರ್ಣ ಮಾಹಿತಿ ಸಿಗಲಿದೆ ಎಂದರು.

ಅಯ್ನಾಝ್ ಮತ್ತು ಪ್ರವೀಣ್ ಇಬ್ಬರು ಸಹೋದ್ಯೋಗಿಗಳಾಗಿದ್ದರು. ಆರೋಪಿ ಪ್ರವೀಣ್ ಚೌಗಲೆಗೆ ಬೇರೆ ಯುವತಿ ಜೊತೆ ಮದುವೆಯಾಗಿತ್ತು. ತಾಂತ್ರಿಕ ಸಾಕ್ಷಿಗಳ ಸಂಗ್ರಹ ಮಾಡಿ ಬಂಧಿಸಿದ್ದೇವೆ. ಕೋರ್ಟ್ಗೆ ಇವತ್ತೇ ಹಾಜರು ಮಾಡುತ್ತೇವೆ. ಕುಟುಂಬ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದೆ. ಕೊಲೆಗೆ ಕಾರಣ ಏನು ಎಂಬುದು ಪ್ರಮುಖ. ಅಯ್ನಾಝ್ ಮತ್ತು ಪ್ರವೀಣ್ ಚೌಗಲೆ ನಡುವಿನ ಸಂಬಂಧಗಳ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು.

Leave a Reply

error: Content is protected !!