ಅಂಗಡಿಯಿಂದ 1 ಲಕ್ಷ ರೂ. ನಗದು ಕಳವು

ಶೇರ್ ಮಾಡಿ

ಉಪ್ಪಿನಂಗಡಿ: ಇಲ್ಲಿನ ರಾಜಧಾನಿ ಟವರ್ಸ್‌ ವಾಣಿಜ್ಯ ಸಂಕೀರ್ಣ ದಲ್ಲಿರುವ ಅಡಿಕೆ ಮಾರಾಟ ಅಂಗಡಿಯಿಂದ ಹಾಡ ಹಗಲೇ ಒಂದು ಲಕ್ಷ ರೂ. ಹಣವನ್ನು ಕದ್ದೊಯ್ದ ಘಟನೆ ಬುಧವಾರ ಸಂಭವಿಸಿದೆ.

ಅಡಿಕೆ ವ್ಯಾಪಾರಿ ಮಧ್ಯಾಹ್ನ ಊಟಕ್ಕೆಂದು ಹೋಗುವ ವೇಳೆ ಕ್ಯಾಶ್‌ ಡ್ರಾವರ್‌ಗೆ ಬೀಗ ಹಾಕಿ, ಅಂಗಡಿಯ ಶಟರ್‌ ಅನ್ನು ಅರ್ಧ ಎಳೆದು ಹೋಗಿದ್ದರು.

ವಾಪಸ್‌ ಬರುವ ವೇಳೆಗೆ ಕ್ಯಾಶ್‌ ಡ್ರಾವರ್‌ ತೆರೆಯಲ್ಪಟ್ಟಿದ್ದು, ಕಳ್ಳರು ಒಂದು ಲಕ್ಷ ರೂ. ನಗದನ್ನು ಕದ್ದೊಯ್ದಿರುವುದು ಗಮನಕ್ಕೆ ಬಂದಿದೆ. ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Leave a Reply

error: Content is protected !!