Udupi Nejar Case; ಆರೋಪಿ ಸ್ಥಳ ಮಹಜರು ವೇಳೆ ಭುಗಿಲೆದ್ದ ಸ್ಥಳೀಯರ ಆಕ್ರೋಶ: ಲಾಠಿ ಚಾರ್ಜ್

ಶೇರ್ ಮಾಡಿ

ಉಡುಪಿ:ತಾಯಿ ಮತ್ತು ಮೂವರು ಮಕ್ಕಳ ಬರ್ಬರ ಹತ್ಯೆ ಪ್ರಕರಣದ ಆರೋಪಿಯನ್ನು ನೇಜಾರಿನಲ್ಲಿ ಸ್ಥಳ ಮಹಜರಿಗೆ ಗುರುವಾರ ಮಧ್ಯಾಹ್ನ ಕರೆ ತಂದಾಗ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದು, ಉದ್ರಿಕ್ತ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಹತ್ಯೆ ನಡೆದ ಮನೆಗೆ ಬಂಧಿತ ಆರೋಪಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಪ್ರವೀಣ್‌ ಚೌಗಲೆ (39)ಯನ್ನು ಪೊಲೀಸರು ಸ್ಥಳ ಮಹಜರಿಗೆ ಬಿಗಿ ಭದ್ರತೆಯ ನಡುವೆ ಕರೆತಂದಿದ್ದಾರೆ. ಈ ವೇಳೆ ಜಮಾಯಿಸಿದ್ದ ಸ್ಥಳೀಯರು ಆಕ್ರೋಶ ಹೊರ ಹಾಕಿ, ಆರೋಪಿಯನ್ನು ನಮಗೊಪ್ಪಿಸಿ ಎಂದು ಘೋಷಣೆ ಕೂಗಿದ್ದಾರೆ. ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಉದ್ರಿಕ್ತರನ್ನು ಚದುರಿಸಿದ್ದಾರೆ.

ಘಟನೆ ಬೆನ್ನಲ್ಲೇ ಆ ಭಾಗದಲ್ಲಿ ರಸ್ತೆ ತಡೆ ಮಾಡಲಾಯಿತು. ಕೆಲ ಕಾಲ ಟ್ರಾಫಿಕ್ ದಟ್ಟನೆ ಉಂಟಾಯಿತು.ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನೂ ಕೂಡಲೇ ಕರೆಸಿಕೊಳ್ಳಲಾಗಿದೆ.

ಬುಧವಾರ ಪ್ರವೀಣ್‌ ಚೌಗಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು, ನ್ಯಾಯಾಲಯ 14 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿದೆ.

Leave a Reply

error: Content is protected !!
%d bloggers like this: