ನೆಲ್ಯಾಡಿ: ಶ್ರೀ ರಾಮ ವಿದ್ಯಾಲಯ ಸೂರ್ಯ ನಗರ ದೀಪಾವಳಿ ಆಚರಣೆ

ಶೇರ್ ಮಾಡಿ

ನೆಲ್ಯಾಡಿ:ವಿದ್ಯಾರ್ಥಿಗಳ ಸಂಯೋಜನೆಯೊಂದಿಗೆ ಮಕ್ಕಳ ಸಂಭ್ರಮ ಮತ್ತು ದೀಪಾವಳಿ ಸಂಭ್ರಮಾಚರಣೆ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಕಾರ ಪರಿವೀಕ್ಷಕರಾದ ಭಗಿನಿ ಮೀನಾಕ್ಷಿ ಮಾತಾಜಿ ಹಾಗೂ ಶಾಲಾ ಆಡಳಿತ ಸಮಿತಿಯ ಕಾರ್ಯದರ್ಶಿಗಳಾದ ಶ್ರೀಯುತ ಮೂಲಚಂದ್ರ ಶ್ರೀಮಾನ್ ಅದೇ ರೀತಿ ಶಾಲಾ ವಿದ್ಯಾರ್ಥಿ ನಾಯಕನಾದ ಚೇತನ್, ಉಪನಾಯಕರಾದ ಮದ್ವಿತ್, ಯಜ್ಞೆಶ್ ಮತ್ತು ಶಾಲಾ ಮುಖ್ಯಗುರುಗಳಾದ ಗಣೇಶ್ ವಾಗ್ಲೆ ಶ್ರೀಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶೇಷವಾಗಿ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಹಣತೆ ಹಚ್ಚಿ ತದನಂತರ ಗೋ ಪೂಜೆಯನ್ನು ನೆರವೇರಿಸಿದರು.

ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಶಿಶು ಮಂದಿರದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಶಕ್ತ ಶೈಕ್ಷಣಿಕ ಸಾಲಿನಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷವಾಗಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಜಿತೇಶ್ ಇವರು ಸ್ವಾಗತಿಸಿದರೆ, ಧನ್ಯವಾದ ಪ್ರತೀಕ್ಷಾ ನೆರವೇರಿಸಿದರು.ಕಾರ್ಯಕ್ರಮವನ್ನು ಭೂಮಿಕಾ ಇವರು ನಿರೂಪಿಸಿದರು.

Leave a Reply

error: Content is protected !!
%d bloggers like this: