ಪುತ್ತಿಲ ಪರಿವಾರ: ತಲವಾರು ಝಳಪಿಸಿದ 7 ಮಂದಿ ಆರೋಪಿಗಳಿಗೆ ಷರತ್ತುಬದ್ದ ಜಾಮೀನು

ಶೇರ್ ಮಾಡಿ

ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಚೇರಿಯ ಮುಂಭಾಗದಲ್ಲಿ ತಲುವಾರಿನೊಂದಿಗೆ ಬಂದ ಪ್ರಕರಣಕ್ಕೆ ಸಬಂಧಿಸಿ 7 ಮಂದಿ ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರುಗೊಳಿಸಿದೆ.

ನ.10ರಂದು ಪುತ್ತೂರು ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಛೇರಿಗೆ ತಂಡವೊಂದು ತಲುವಾರು ತಂದು ಅವಾಚ್ಯ ಶಬ್ದಗಳಿಂದ ನಿಂಧಿಸಿದ ಪ್ರಕರಣದಲ್ಲಿ ಶಾಂತಿಗೋಡು ಗ್ರಾಮದ ದಿನೇಶ್‌ ಪಂಜಿಗ, ನರಿಮೊಗರು ಗ್ರಾಮದ ಭವಿತ್‌, ಬೊಳುವಾರು ನಿವಾಸಿ ಮನ್ವಿತ್‌, ಚಿಕ್ಕಮುಟ್ನೂರು ನಿವಾಸಿ ಜಯಪ್ರಕಾಶ್‌, ಚರಣ್‌, ಬನ್ನೂರು ಗ್ರಾಮದ ಮನೀಶ್‌, ಕಬಕದ ವಿನೀತ್‌ ಮತ್ತು ಇಬ್ಬರು ಅಪ್ರಾಪ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅಪ್ರಾಪ್ತರನ್ನು ರಾತ್ರಿ ವೇಳೆ ಬಿಡುಗಡೆ ಮಾಡಲಾಗಿತ್ತು. ಉಳಿದ 7 ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಷರತ್ತುಬದ್ದ ಜಾಮೀನು ಮಂಜೂರುಗೊಳಿಸಿದೆ.

Leave a Reply

error: Content is protected !!
%d