ಸಧ್ಯ ಕೇಂದ್ರ ಸರ್ಕಾರ ಎಲ್‌ಪಿಜಿ ಗ್ಯಾಸ್ ಸಂಪರ್ಕವನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ಸೂಚಿಸಿದೆ. ಈ ಪ್ರಕ್ರಿಯೆಯನ್ನು ಗ್ರಾಹಕರು ಪೂರ್ಣಗೊಳಿಸದಿದ್ದರೆ, LPG ಗ್ಯಾಸ್ ಸಿಲಿಂಡರ್ ಸಬ್ಸಿಡಿಯ ಲಾಭ ಪಡೆಯಲು ಸಾಧ್ಯವಿಲ್ಲ. ಈ ಕುರಿತು ಹೆಚ್ಚಿನ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ..
ಎಲ್‌ಪಿಜಿ ಗ್ಯಾಸ್ ಸಂಪರ್ಕದ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಆಗ ಮಾತ್ರ ಸಬ್ಸಿಡಿ ಸಿಗುತ್ತದೆ. ನಿಮ್ಮ LPG ಗ್ಯಾಸ್ ಸಂಪರ್ಕವನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ, ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಈ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು.
ಆಧಾರ್ ಕಾರ್ಡ್‌ನಲ್ಲಿ LPG ಗ್ಯಾಸ್ ಸಂಪರ್ಕವನ್ನು ಲಿಂಕ್ ಮಾಡಲು ನೀವು ಮೊದಲು UIDAI ಅಧಿಕೃತ ವೆಬ್‌ಸೈಟ್ https://uidai.gov.in/ ಗೆ ಭೇಟಿ ನೀಡಿ. ಅದರ ನಂತರ ಸೆಲ್ಫ್ ಸೀಡಿಂಗ್ ಪುಟಕ್ಕೆ ಹೋಗಿ. ಅದರಲ್ಲಿ ಕೇಳಲಾದ ಮಾಹಿತಿಯನ್ನು ನಮೂದಿಸಿ. ಇಲ್ಲಿ ನೀವು LPG ಅನ್ನು ಆಯ್ಕೆ ಮಾಡಬೇಕು ಮತ್ತು ಆಯಾ ಗ್ಯಾಸ್ ಕಂಪನಿ IVOCL, BPCL, HPCL ಅನ್ನು ನಮೂದಿಸಬೇಕು.
ಈಗ ವಿತರಕರ ಪಟ್ಟಿ ನಿಮ್ಮ ಮುಂದೆ ಕಾಣಿಸುತ್ತದೆ. ಅದರಲ್ಲಿ ನಿಮ್ಮ ವಿತರಕರನ್ನು ಆಯ್ಕೆಮಾಡಿ. ಅದರ ನಂತರ ಗ್ಯಾಸ್ ಸಂಪರ್ಕ ಸಂಖ್ಯೆ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಮೇಲ್ ಐಡಿ ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಯೊಂದಿಗೆ ವಿವರಗಳನ್ನು ಪರಿಶೀಲಿಸಿ. ಅಷ್ಟೆ, ನಿಮ್ಮ ಆಧಾರ್ ಕಾರ್ಡ್ ಅನ್ನು LPG ಗ್ಯಾಸ್ ಸಂಪರ್ಕದೊಂದಿಗೆ ಲಿಂಕ್ ಆದಂತೆ.
ಆಧಾರ್ ಲಿಂಕ್ ಮಾಡುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಗ್ಯಾಸ್ ಸಂಪರ್ಕವು ಯಾರ ಹೆಸರಿನಲ್ಲಿದೆಯೋ ಅವರ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್‌ನಲ್ಲಿರಬೇಕು. LPG ಗ್ಯಾಸ್ ಸಂಪರ್ಕದ ಹೆಸರು ಮತ್ತು ಆಧಾರ್ ಹೆಸರು ಒಂದೇ ಆಗಿರಬೇಕು.
ಆಧಾರ್ ಕಾರ್ಡ್ ಅನ್ನು LPG ಗ್ಯಾಸ್ ಸಂಪರ್ಕದೊಂದಿಗೆ ಆಫ್‌ಲೈನ್‌ನಲ್ಲಿಯೂ ಲಿಂಕ್ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ವಿತರಕರ ಬಳಿಗೆ ಹೋಗಿ, ಅವರಿಂದ ಅಪ್ಲಿಕೇಶನ್ ಪಡೆದು ಭರ್ತಿ ಮಾಡಿ, ನಿಮ್ಮ ಆಧಾರ್ ಕಾರ್ಡ್‌ನ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ ಅವರಿಗೆ ನೀಡಿದರೆ, ಅವರೇ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.