ಬ್ರಿಟಿಷರು ಭಾರತದ ಭೌಗೋಳಿಕ ಪ್ರದೇಶದ ಮೇಲೆ ಮಾತ್ರ ಆಕ್ರಮಣ ಮಾಡದೆ ನಮ್ಮ ಭಾರತೀಯ ಸಂಸ್ಕೃತಿಯ ಮೇಲೂ ಆಕ್ರಮಣ ಮಾಡಿದ್ದು, ಇಂದಿನ ವಿದ್ಯಾರ್ಥಿಗಳು ಆ ಆಕ್ರಮಣದ ಸತ್ಯವನ್ನು ತಿಳಿದು ನಮ್ಮ ಸಂಸ್ಕೃತಿಯನ್ನು ಯಾವುದೇ ರೀತಿಯ ಅಂಜಿಕೆ ಇಲ್ಲದೆ ಒಪ್ಪಿಕೊಳ್ಳಬೇಕು. ಬ್ರಿಟಿಷರ ಕಾಲದ ಕ್ಯಾಲೆಂಡರ್ ಪದ್ಧತಿ ಇನ್ನೂ ಬಳಕೆಯಲ್ಲಿದ್ದು ಅದಕ್ಕಿಂತಲೂ ಶ್ರೇಷ್ಠತೆಯನ್ನು ಸಾರುವ ಪಂಚಾಂಗ ನಮ್ಮ ಹಿರಿಯರು ನಮಗೆ ನೀಡಿದ ಕೊಡುಗೆ. ಮುಂದಿನ ದಿನಗಳಲ್ಲಿ ಕ್ಯಾಲೆಂಡರ್ ಅನುಸರಿಸಿ ದಿನ, ವಾರ, ತಿಂಗಳುಗಳ್ಳನ್ನು ಹೇಳದೆ ಪಂಚಾಂಗಕ್ಕ ಅನುಗುಣವಾಗಿ ನಮ್ಮ ನಿತ್ಯ ಜೀವನ ನಡೆಯುವಂತಾಗಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ನೈತಿಕ ಮತ್ತು ಸಂಸ್ಕಾರ ಶಿಕ್ಷಣ ಪ್ರಮುಖರಾದ ಮೀನಾಕ್ಷಿ ನುಡಿದರು.
ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪಂಚಾಂಗ ವಾಚನದ ಪ್ರಾಮುಖ್ಯತೆಯನ್ನು ತಿಳಿಸಿದರು. ಪಂಚಾಂಗವು ನಮ್ಮ ಪ್ರಕೃತಿಯ ಚಲನವಲನಗಳನ್ನ ಆಧಾರಿಸಿ ರಚನೆ ಮಾಡಲಾಗಿದ್ದು, ವೈಜ್ಞಾನಿಕವಾಗಿಯೂ ಅರ್ಥಪೂರ್ಣವಾಗಿದೆ. ಕಿರಿಯ ವಿದ್ಯಾರ್ಥಿಗಳಿಗೆ ನೀತಿ ಕಥೆ, ಅಭಿನಯ ಗೀತೆಗಳನ್ನು ಹೇಳಿಕೊಡುವುದರೊಂದಿಗೆ ಮನೋರಂಜನಾ ಆಟಗಳನ್ನು ಆಡಿಸಿದರು.
ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ಚಂದ್ರಶೇಖರ ಶೇಟ್, ಸಹ ಶಿಕ್ಷಕರು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.