ಎತ್ತಿನ ಗಾಡಿಯಲ್ಲಿ ಸುದೀಪ್‌ ಮನೆಗೆ ಬಂದು Bigg Boss ಗೆ ನನ್ನನ್ನೂ ಕಳುಹಿಸಿ ಎಂದ ವ್ಯಕ್ತಿ.!

ಶೇರ್ ಮಾಡಿ

ಕಿಚ್ಚ ಸುದೀಪ್‌ ನಡೆಸಿಕೊಡುವ ಬಿಗ್‌ ಬಾಸ್‌ ಸೀಸನ್‌ 10 ಕುತೂಹಲ ಘಟ್ಟದಲ್ಲಿ ಸಾಗುತ್ತಿದೆ. ಇತ್ತೀಚೆಗಷ್ಟೇ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರ ಬಂದಿದ್ದಾರೆ. ಅತ್ತ ದೊಡ್ಮನೆಯೊಳಗೆ ಬಿಗ್‌ ಬಾಸ್‌ ಪಟ್ಟಕ್ಕಾಗಿ ನಿಜವಾದ ಆಟ ನಿಧಾನವಾಗಿ ಶುರುವಾಗುತ್ತಿದೆ.

ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಟಿವಿರಂಗದ ಸ್ಟಾರ್‌ ಗಳು ಹಾಗೂ ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗಿಯಾಗುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಾದವರು ಕೂಡ ಬಿಗ್‌ ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಭಾಗವಹಿಸುತ್ತಾರೆ.

ತನ್ನನ್ನು ಬಿಗ್‌ ಬಾಸ್‌ ಮನೆಯೊಳಗೆ ಕಳುಹಿಸಿ ಕೊಡಿ ಎಂದು ಒಬ್ಬ ವ್ಯಕ್ತಿ ಕಿಚ್ಚನ ನಿವಾಸಕ್ಕೆ ಬಂದು ಹೈಡ್ರಾಮಾ ಮಾಡಿರುವ ಘಟನೆ ಭಾನುವಾರ ಸಂಜೆ(ನ.19 ರಂದು) ನಡೆದಿದೆ.

ಮೈಸೂರಿನ ಟಿ.ನರಸಿಪುರದಿಂದ ಎತ್ತಿನ ಗಾಡಿಯಲ್ಲಿ ಮಂಜು ಎಂಬ ರೈತ ಕಿಚ್ಚ ಸುದೀಪ್‌ ಅವರ ಜೆಪಿ ನಗರದ ನಿವಾಸದ ಮುಂದೆ ಬಂದು ಬಿಗ್‌ ಬಾಸ್‌ ಮನೆಯೊಳಗೆ ಕಳುಹಿಸಿ ಎಂದು ರಾದ್ಧಾಂತ ಮಾಡಿರುವ ಘಟನೆ ನಡೆದಿದೆ.

ನಾವು ಅಕ್ಷರ ಕಲಿಯದ ಅನಕ್ಷರಸ್ಥರು. ನಮ್ಮಂತಹ ರೈತರು ಬಿಗ್‌ ಬಾಸ್‌ ಮನೆಯೊಳಗೆ ಹೋಗಲು ಅವಕಾಶ ಕೊಡಿ ಎಂದು ಹೇಳಿದ್ದಾರೆ. ಸಂಜೆ 6 ರಿಂದ 10 ಗಂಟೆಯವರೆಗೆ ಸುದೀಪ್‌ ಮನೆ ಮುಂದೆ ಎತ್ತಿನ ಗಾಡಿ ಹಿಡಿದು ನಿಂತಿದ್ದ ಇವರು, ಆ ಬಳಿಕ ಮನೆಯ ಸೆಕ್ಯೂರಿಟಿ ಗಾರ್ಡ್‌ ಸುದೀಪ್‌ ಮನೆಯಲ್ಲಿ ಇಲ್ಲ, ಚೆನ್ನೈಗೆ ತೆರಳಿದ್ದಾರೆ ಎಂದು ಹೇಳಿ, ಮನವಿಯನ್ನು ಮಾಡಿ ಹರಸಾಹಸಪಟ್ಟು ವಾಪಾಸ್‌ ಕಳುಹಿಸಿದ್ದಾರೆ ಎನ್ನಲಾಗಿದೆ.

Leave a Reply

error: Content is protected !!
%d bloggers like this: