ಹಾಸಿಗೆಯ ಅರ್ಧ ಭಾಗದಲ್ಲಿ ಮಲಗಿ, ಉಳಿದ ಅರ್ಧ ಭಾಗವನ್ನು ಬಾಡಿಗೆಗೆ ನೀಡುತ್ತಾಳೆ ಈ ಮಹಿಳೆ.!! ಕಾರಣ ಏನು ಗೊತ್ತಾ?

ಶೇರ್ ಮಾಡಿ

ಸಾಮಾನ್ಯವಾಗಿ ಮನೆ, ಕಾರು, ಬೈಕು ಮುಂತಾದವುಗಳನ್ನು ಬಾಡಿಗೆಗೆ ಕೊಡಲಾಗುತ್ತದೆ. ಆದರೆ ಇಲ್ಲೊಂದು ವಿಚಿತ್ರ ಸಂಗತಿ ಎಂದರೆ ಮಹಿಳೆಯೊಬ್ಬಳು ತಾನು ಮಲಗುವ ಹಾಸಿಗೆಯ ಅರ್ಧ ಭಾಗವನ್ನು ಬಾಡಿಗೆಗೆ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​​ ಒಂದನ್ನು ಹಂಚಿಕೊಂಡಿದ್ದಾಳೆ. ಜೊತೆಗೆ ಅರ್ಧ ಹಾಸಿಗೆಯ ಬಾಡಿಗೆ ಹಾಗೂ ಆಕೆ ಹಾಕಿರುವ ಕೆಲವು ಶರತ್ತುಗಳನ್ನು ಕೇಳಿದರೆ ಆಶ್ಚರ್ಯವಾಗುವುದಂತೂ ಖಂಡಿತಾ. ಅಷ್ಟಕ್ಕೂ ಬ್ಯಾಚುರಲ್​​​ ಜೀವನ ನಡೆಸುತ್ತಿರುವ ಈ ಮಹಿಳೆ ತನ್ನ ಹಾಸಿಗೆಯ ಅರ್ಧ ಭಾಗದಲ್ಲಿ ಮಲಗಿ, ಉಳಿದ ಅರ್ಧ ಭಾಗವನ್ನು ಬಾಡಿಗೆಗೆ ನೀಡಲು ಕಾರಣ ಏನು ಗೊತ್ತಾ?

ಕೆನಡಾದ ಟೊರೊಂಟೊದಲ್ಲಿ ವಾಸಿಸುತ್ತಿರುವ ಈ ಯುವತಿಯ ಹೆಸರು ಅನ್ಯಾ ಎಟ್ಟಿಂಗರ್. ಡೈಲಿ ಸ್ಟಾರ್ ಪ್ರಕಾರ, ಅನ್ಯಾ ಫೇಸ್‌ಬುಕ್ ಮಾರ್ಕೆಟ್‌ ಪ್ಲೇಸ್‌ನಲ್ಲಿ ಹಾಸಿಗೆಯ ಅರ್ಧ ಭಾಗವನ್ನು ಮಾರಾಟ ಮಾಡುವುದಾಗಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.ಈ ವೀಡಿಯೋದಲ್ಲಿ ತಾನು ‘ಬೆಡ್‌ಮೇಟ್’ಗಾಗಿ ಹುಡುಕುತ್ತಿದ್ದೇನೆ ಎಂದು ಹೇಳಿದ್ದಾಳೆ. ಟೊರೊಂಟೊ ಅತ್ಯಂತ ದುಬಾರಿ ನಗರವಾದ್ದರಿಂದ ನನ್ನ ಮನೆಯ ಬಾಡಿಗೆಯನ್ನು ಕಟ್ಟಲು ಕಷ್ಟ ಪಡುತ್ತಿದ್ದೇನೆ. ಅದಕ್ಕಾಗಿಯೇ ಬೆಡ್‌ಮೇಟ್ ನ್ನು ಹುಡುಕುತ್ತಿದ್ದೇನೆ, ನನ್ನೊಂದಿಗೆ ಹಾಸಿಗೆಯ ಮೇಲೆ ಮಲಗಬಹುದು ಎಂದು ಹೇಳಿಕೊಂಡಿದ್ದಾಳೆ.

ಹಾಸಿಗೆಯ ಅರ್ಧ ಭಾಗದಲ್ಲಿ ಮಲಗಲು ಷರತ್ತುಗಳು:
ತನ್ನ ಹಾಸಿಗೆಯನ್ನು ಬಾಡಿಗೆಗೆ ನೀಡಲು ಮೊದಲ ಷರತ್ತು ತನ್ನ ‘ಬೆಡ್‌ಮೇಟ್’ ಹುಡುಗಿಯಾಗಿರಬೇಕು ಮತ್ತು ಅವಳು ತನ್ನೊಂದಿಗೆ ಕನಿಷ್ಠ ಒಂದು ವರ್ಷ ಇರಬೇಕು ಎಂದು ಹೇಳಿಕೊಂಡಿದ್ದಾಳೆ. ಇದಲ್ಲದೇ ತಿಂಗಳಿಗೆ ಅರ್ಧ ಭಾಗ ಹಾಸಿಗೆಯಲ್ಲಿ 75,000 ರೂ. ಬಾಡಿಗೆಯನ್ನು ನೀಡಬೇಕು ಎಂದು ಹೇಳಿಕೊಂಡಿದ್ದಾಳೆ.

Leave a Reply

error: Content is protected !!
%d bloggers like this: