ಪೆಟ್ರೋಲ್ ಬಂಕ್‌ನಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ಟಿಪ್ಪರ್ – ಒಬ್ಬ ಸ್ಥಳದಲ್ಲೇ ಸಾವು

ಶೇರ್ ಮಾಡಿ

ಪೆಟ್ರೋಲ್ ಪಂಪ್ ಒಂದರಲ್ಲಿ ಮಲಗಿದ್ದ ಕಾರ್ಮಿಕರ ಮೇಲೆ ಟಿಪ್ಪರ್ ಹರಿದು ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೆಬ್ರಿ ಸಮೀಪದ ಸೋಮೇಶ್ವರ ಪೆಟ್ರೋಲ್ ಪಂಪ್‌ನಲ್ಲಿ ನಡೆದಿದೆ.

ಶಿವರಾಜ್ (38) ಟಿಪ್ಪರ್ ಹರಿದ ಪರಿಣಾಮ ಸಾವನ್ನಪ್ಪಿದ ಕಾರ್ಮಿಕ. ಮೃತ ಶಿವರಾಜ್ ಸಾಗರ ತಾಲೂಕಿನ ಕೊರ್ಲಿ ಕೊಪ್ಪದ ನಿವಾಸಿ. ಶಿವರಾಜ್ ಹಾಗೂ ಮಹೇಂದ್ರ ಎಂಬವರು ಪೆಟ್ರೋಲ್ ಪಂಪ್ ಬಳಿ ತಮ್ಮ ವಾಹನವನ್ನು ಬದಿಗಿಟ್ಟು ಮಲಗಿದ್ದರು. ನಿದ್ರೆಗೆ ಜಾರಿದ್ದ ವೇಳೆ ದುರ್ಘಟನೆ ನಡೆದಿದೆ.

ಅದೇ ಪೆಟ್ರೋಲ್ ಪಂಪ್‌ಗೆ ಬಂದು ಪೆಟ್ರೋಲ್ ಹಾಕಿಸಿ ನಿರ್ಗಮಿಸುತ್ತಿದ್ದ ಟಿಪ್ಪರ್, ಅಲ್ಲೇ ಮಲಗಿದ್ದ ಶಿವರಾಜ್ ಹಾಗೂ ಮಹೇಂದ್ರ ಮೇಲೆ ಹರಿದಿದೆ. ಇದರಿಂದ ಶಿವರಾಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಮಹೇಂದ್ರ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply

error: Content is protected !!