ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿ ಸಿಕ್ಕಿಬಿದ್ದ ಲಾರಿ ಚಾಲಕ

ಶೇರ್ ಮಾಡಿ

ದ್ವಿಚಕ್ರ ವಾಹನವೊಂದಕ್ಕೆ ಲಾರಿಯೊಂದು ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿ ಕೊನೆಗೂ ಟ್ರಾಫಿಕ್ ಪೊಲೀಸರ‌ ಕೈ ಗೆ ಸಿಕ್ಕಿಬಿದ್ದ ಘಟನೆ ರಾ. ಹೆದ್ದಾರಿ ಮಂಗಳೂರು-ಬೆಂಗಳೂರು ಮಧ್ಯೆ ಬಿಸಿರೋಡಿನಲ್ಲಿ ನಡೆದಿದೆ.

ಗಿರಿಯಪ್ಪ ಮೂಲ್ಯ ಜಾರಂದಗುಡ್ಡೆ ಎಂಬವರ ಸ್ಕೂಟರ್ ಗೆ ಐಶರ್ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡಿನ ಕೈಕುಂಜೆ ಕ್ರಾಸ್ ರಸ್ತೆಯಲ್ಲಿ ಢಿಕ್ಕಿ ಹೊಡೆದಿದೆ.

ಡಿಕ್ಕಿಯಾದ ರಭಸಕ್ಕೆ ಸ್ಕೂಟರ್ ಪಲ್ಟಿಯಾಗಿ ಸವಾರ ಗಿರಿಯಪ್ಪ ಅವರಿಗೆ ಗಾಯವಾಗಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿಕ್ಕಿ ಹೊಡೆದ ಲಾರಿ ಚಾಲಕ ಸಾರ್ವಜನಿಕರು ನೋಡುತ್ತಿದ್ದಂತೆ ಅಲ್ಲಿಂದ ಲಾರಿ ಸಮೇತ ಎಸ್ಕೇಪ್ ಆಗಿದ್ದಾನೆ. ಆದರೆ ಬಿಸಿರೋಡಿನ ಪಾಯಿಂಟ್ ನಲ್ಲಿ ಕರ್ತವ್ಯ ‌ಮಾಡುತ್ತಿದ್ದ ಟ್ರಾಫಿಕ್ ಸಿಬ್ಬಂದಿ ರಾಜು ಪೂಜಾರಿ ಅವರ ಗಮನಕ್ಕೆ ಸಾರ್ವಜನಿಕರು ಅಪಘಾತದ ವಿಚಾರ ತಿಳಿಸುತ್ತಿದ್ದಂತೆ ಲಾರಿಯನ್ನು ಬೆನ್ನಟ್ಟಿ ಬಂಟ್ವಾಳದ ಬಸ್ತಿಪಡ್ಪು ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆಯ ಕುರಿತು ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

error: Content is protected !!