ಪೂಜಾ ಗಾಂಧಿ ಮದುವೆ ಆಗಲಿರೋ ಹುಡುಗ ಹೇಗಿದ್ದಾರೆ ನೋಡಿ

ಶೇರ್ ಮಾಡಿ

ಮುಂಗಾರು ಮಳೆ’ ಬೆಡಗಿ ಪೂಜಾ ಗಾಂಧಿ (Pooja Gandhi) ಅವರು ನವೆಂಬರ್ 29ರಂದು ಮದುವೆ ಆಗಲಿದ್ದಾರೆ ಎಂದು ವರದಿ ಆಗಿತ್ತು. ವಿಜಯ್ ಗೋರ್ಪಡೆ ಅವರನ್ನು ಪೂಜಾ ಗಾಂಧಿ ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ವಿಜಯ್ ಅವರ ಫೋಟೋ ವೈರಲ್ ಆಗಿದೆ. ಬೆಂಗಳೂರಿನ ಯಲಹಂಕದಲ್ಲಿ ಪೂಜಾ ಗಾಂಧಿ ಅವರ ವಿವಾಹ ನೆರವೇರಲಿದೆ. ಅವರಿಗೆ ಮೊದಲೇ ಶುಭಾಶಯ ಬರುತ್ತಿದೆ.

ವಿಜಯ್ ಅವರು ಬೆಂಗಳೂರಿನಲ್ಲಿ ತಮ್ಮದೇ ಲಾಜಿಸ್ಟಿಕ್ ಕಂಪನಿ ಹೊಂದಿದ್ದಾರೆ. ವಿಜಯ್ ಹಾಗೂ ಪೂಜಾ ಗಾಂಧಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈಗ ಇಬ್ಬರೂ ತಮ್ಮ ಪ್ರೀತಿಗೆ ಹೊಸ ಅರ್ಥ ನೀಡುತ್ತಿದ್ದಾರೆ. ಪೂಜಾ ಹಾಗೂ ವಿಜಯ್ ಜೋಡಿ ಉತ್ತಮವಾಗಿದೆ ಎಂದು ಅನೇಕರು ಹೇಳಿದ್ದಾರೆ.

ಪೂಜಾ ಗಾಂಧಿ ಅವರು ಮೂಲತಃ ಉತ್ತರ ಪ್ರದೇಶದವರು. ‘ಮುಂಗಾರು ಮಳೆ’ ಸಿನಿಮಾ ಗೆದ್ದ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಹಲವು ಸಿನಿಮಾಗಳನ್ನು ಒಪ್ಪಿ ಅವರು ನಟಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಪೂಜಾ ಗಾಂಧಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕಕ್ಕೆ ಬಂದು ಅವರು ಕನ್ನಡ ಕಲಿತಿದ್ದಾರೆ. ವಿಜಯ್ ಅವರೇ ಪೂಜಾ ಗಾಂಧಿಗೆ ಕನ್ನಡ ಕಲಿಸಿದ್ದರು ಎನ್ನಲಾಗಿದೆ.

ಪೂಜಾ ಗಾಂಧಿ ಹಾಗೂ ಗಣೇಶ್ ನಟನೆಯ ‘ಮುಂಗಾರು ಮಳೆ’ ಸಿನಿಮಾ ಸೂಪರ್ ಹಿಟ್ ಆಯಿತು. ನಿರ್ದೇಶಕ ಯೋಗರಾಜ್ ಭಟ್ ಸ್ಯಾಡ್ ಎಂಡಿಂಗ್ ಕೊಟ್ಟಿದ್ದರಿಂದ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಬಗ್ಗೆ ಈಗಲೂ ಅನೇಕರು ಮಾತನಾಡುತ್ತಾರೆ.

ಪೂಜಾ ಗಾಂಧಿ ಅವರು 2012ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಉದ್ಯಮಿ ಆನಂದ್ ಗೌಡ ಜೊತೆ ಅವರು ಎಂಗೇಜ್​ಮೆಂಟ್ ಮಾಡಿಕೊಂಡಿದ್ದರು. ಆದರೆ, ಇವರ ಸಂಬಂಧ ಹಾಳಾಯಿತು. ಆ ಬಳಿಕ ಅವರು ಮದುವೆ ಬಗ್ಗೆ ಆಲೋಚನೆ ಮಾಡಿರಲಿಲ್ಲ. ಈಗ ಅವರು ಸಿಂಪಲ್ ಆಗಿ ಮದುವೆ ಆಗೋಕೆ ಮುಂದಾಗಿದ್ದಾರೆ.

Leave a Reply

error: Content is protected !!