ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಶೇರ್ ಮಾಡಿ

ಚಾಲಕನ ನಿಯಂತ್ರಣ ತಪ್ಪಿ ಉಜಿರೆ ಸಮೀಪದ ಕನ್ಯಾಡಿ-2 ಗ್ರಾಮದ ಮಸೀದಿ ಬಳಿ ತಮಿಳುನಾಡು ಮೂಲದ ಕಾರೊಂದು ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಸೋಮವಾರ ನಡೆದಿದೆ.

ಕಾರು ಉಜಿರೆಯಿಂದ ಧರ್ಮಸ್ಥಳ ಕಡೆಗೆ ಸಂಚರಿಸುತ್ತಿತ್ತು. ಘಟನೆ ಯಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಿದ್ಯುತ್‌ ಕಂಬ ಮುರಿದಿದೆ.

ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ ಕಾರಿನಲ್ಲಿದ್ದರು ಪಾರಾಗಿದ್ದಾರೆ.

Leave a Reply

error: Content is protected !!