ಕಾಲೇಜಿನಲ್ಲಿ ಬುರ್ಕಾ ಧರಿಸಿ ವಿದ್ಯಾರ್ಥಿನಿಯರಿಂದ ರ‍್ಯಾಂಪ್‌ ವಾಕ್ – ಮುಸ್ಲಿಂ ಸಂಘಟನೆ ಕಿಡಿ

ಶೇರ್ ಮಾಡಿ

ಬುರ್ಕಾ ಧರಿಸಿ ವಿದ್ಯಾರ್ಥಿನಿಯರು ರ‍್ಯಾಂಪ್‌ ವಾಕ್‌ ಉತ್ತರ ಪ್ರದೇಶದ ಮುಜಾಫರ್‌ನಗರದ ಕಾಲೇಜಿನಲ್ಲಿ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯರ ವಿರುದ್ಧ ಮುಸ್ಲಿಂ ಸಂಘಟನೆಯೊಂದು ಗರಂ ಆಗಿದ್ದು, ಕ್ಷಮೆಯಾಚಿಸುವಂತೆ ಒತ್ತಾಯಿಸಿದೆ.

ಕೆಲವು ವಿದ್ಯಾರ್ಥಿನಿಯರು ತಮ್ಮ ಸೃಜನಶೀಲತೆ ಪ್ರದರ್ಶಿಸಲು ಹಾಗೂ ವಿವಿಧತೆಯಲ್ಲಿ ಏಕತೆ ಸಂದೇಶ ಸಾರುವ ದೃಷ್ಟಿಯಿಂದ ಕಾಲೇಜಿನಲ್ಲಿ ಬುರ್ಕಾ ಧರಿಸಿ ರ‍್ಯಾಂಪ್‌ ವಾಕ್‌ ಮಾಡಿದ್ದರು. ಆದರೆ ಈ ಬೆಳವಣಿಗೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಬುರ್ಕಾವು “ಪರ್ದಾ” (ಹೊದಿಕೆ) ಬಟ್ಟೆಯಾಗಿದೆ. ಫ್ಯಾಷನ್ ಶೋಗೆ ಬಳಸುವ ವಸ್ತುವಲ್ಲ ಎಂದು ಜಮಿಯತ್ ಉಲಮಾದ ಪ್ರತಿನಿಧಿ ತಿಳಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಪರ ನಿಂತಿದೆ. ದಾರುಲ್ ಉಲೂಮ್‌ನ ಪ್ರತಿನಿಧಿಯಿಂದ ಬೆಂಬಲ ವ್ಯಕ್ತವಾಗಿದೆ. ಫ್ಯಾಷನ್ ಶೋ ಒಂದು ರೀತಿಯ ಪ್ರಾತಿನಿಧ್ಯ ಎಂದು ಕಾಲೇಜು ತಿಳಿಸಿದೆ.

ಭಾನುವಾರ ಮುಜಾಫರ್‌ನಗರದ ಶ್ರೀರಾಮ ಕಾಲೇಜಿನಲ್ಲಿ ನಡೆದ ಫ್ಯಾಷನ್ ಶೋನ ವಿಡಿಯೋ ವೈರಲ್ ಆದ ನಂತರ ವಿವಾದ ಭುಗಿಲೆದ್ದಿದೆ. ಫ್ಯಾಷನ್ ಸ್ಪ್ಲಾಶ್ ಎಂಬ ಮೂರು ದಿನಗಳ ಈವೆಂಟ್‌ನಲ್ಲಿ ವಿದ್ಯಾರ್ಥಿಗಳು ಪಾಶ್ಚಾತ್ಯ ಮತ್ತು ಸಾಂಪ್ರದಾಯಿಕ ಉಡುಗೆಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಗುಂಪು ಬುರ್ಕಾಗಳನ್ನು ಧರಿಸಿ ರಾಂಪ್‌ನಲ್ಲಿ ನಡೆದರು. ಫ್ಯಾಷನ್ ಡಿಸೈನ್ ಓದುತ್ತಿರುವ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಮಾಜಿ ನಟ ಹಾಗೂ ಕಿರುತೆರೆ ನಟರೊಬ್ಬರು ಉಪಸ್ಥಿತರಿದ್ದರು.

ಈ ಘಟನೆಯನ್ನು ಖಂಡಿಸುತ್ತೇವೆ. ಬುರ್ಕಾ ಫ್ಯಾಷನ್‌ನ ವಸ್ತುವಲ್ಲ. ಇದು ಮುಸ್ಲಿಂ ಮಹಿಳೆಯರ ಘನತೆ ಮತ್ತು ಗೌರವದ ಸಂಕೇತವಾಗಿದೆ ಎಂದು ಬುರ್ಕಾವನ್ನು ಧರಿಸಲಾಗುತ್ತದೆ. ಇದರಿಂದ ಮಹಿಳೆಯರು ತಪ್ಪು ಉದ್ದೇಶಗಳನ್ನು ಹೊಂದಿರುವ ಪುರುಷರ ನೋಟವನ್ನು ತಪ್ಪಿಸಬಹುದು. ನಿರ್ದಿಷ್ಟ ಧರ್ಮವನ್ನು ಗುರಿಯಾಗಿಟ್ಟುಕೊಂಡು ಇನ್ನೊಬ್ಬರ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಕಾಲೇಜು ಅಧಿಕಾರಿಗಳು ಯೋಗ್ಯವಲ್ಲ ಎಂದು ಕಿಡಿಕಾರಿದ್ದಾರೆ.

Leave a Reply

error: Content is protected !!