ರಾಜ್ಯ ಮಟ್ಟದ ಕವನ ವಾಚನ ಸ್ಪರ್ಧೆ ಕು.ನಿತ್ಯಶ್ರೀ ಖಂಡಿಗ ಆಯ್ಕೆ

ಶೇರ್ ಮಾಡಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ(ಆಡಳಿತ) ಕಚೇರಿ ಮಂಗಳೂರು ದ.ಕ ಜಿಲ್ಲೆ ಇದರ ಆಶ್ರಯದಲ್ಲಿ ಶ್ರೀ ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ ಬಂಟ್ಸ್ ಹಾಸ್ಟೆಲ್ ಮಂಗಳೂರು ನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ 2023-24 ಕವನ ವಾಚನ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಪೆರ್ಲ-ಬೈಪಾಡಿ ಸರಕಾರಿ ಪ್ರೌಢ ಶಾಲೆಯ 9 ತರಗತಿ ವಿದ್ಯಾರ್ಥಿನಿ ಕು|ನಿತ್ಯಶ್ರೀ ಖಂಡಿಗ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರು ಬಂದಾರು ಗ್ರಾಮದ ಮೈರೋಳ್ತಡ್ಕ ಖಂಡಿಗ ನಿವಾಸಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ ಖಂಡಿಗ ಇವರ ಸಹೋದರ ದಿ|ಸಂಜೀವ ಗೌಡ ಮತ್ತು ಶ್ರೀಮತಿ ಮೋಹಿನಿ ದಂಪತಿಗಳ ಪುತ್ರಿಯಾಗಿದ್ದಾರೆ.

Leave a Reply

error: Content is protected !!