ಮಂಗಳೂರು: ಅತೀವ ಬರಗಾಲದಿಂದ ತೊಂದರೆಗೆ ಈಡಾಗಿರುವ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ಸೋತಿರುವ ಕರ್ನಾಟಕ ರಾಜ್ಯ ಸರಕಾರ ಹಾಗೂ ಕೇಂದ್ರದ ಓಕ್ಕೂಟ ಸರಕಾರದ ವಿರುದ್ಧ ಇಂದು(ಡಿ.4) ರಂದು ಆಮ್ ಆದ್ಮಿ ಪಾರ್ಟಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟಣೆಯನ್ನು ಹಮ್ಮಿಕೊಂಡಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರಸ್ಥಾನ ಮಂಗಳೂರಿನಲ್ಲಿ ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಜಿಲ್ಲಾಧ್ಯಕ್ಷ ಡಾ ವಿಶುಕುಮಾರ ಅವರ ನೇತ್ರತ್ವದಲ್ಲಿ ಆಪ್ ಕಾರ್ಯಕರ್ತರು ಪ್ರತಿಭಟನೆಗೈದರು. ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ ಆವರು “ರಾಜ್ಯ ಸರಕಾರ ಯಾವುದೇ ಕಾರಣ ನೀಡದೆ ಕೂಡಲೆ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ವರ್ಗಾಯಿಸಬೇಕು, ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು” ಎಂದು ಹೇಳಿದರು.
ಕರ್ನಾಟಕದ ಒಟ್ಟು 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಬಹುತೆಕ ರಾಜ್ಯಕೆ ರಾಜ್ಯವೇ ಬರ ಪರಿಸ್ಥಿತಿಯಂದ ಕಂಗೆಟ್ಟಿದೆ. ಈ ಪೈಕಿ 196 ತಾಲೂಕುಗಳನ್ನು ತೀವ್ರ ಬರ ಪೀಡಿತ ಎಂದು ವರ್ಗಿಕರಿಸಲಾಗಿದೆ ಎಂದು ಅವರು ಹೇಳಿದರು. ಸುಮಾರು 48 ಲಕ್ಷ ಹೆಕ್ಟೆರ್ ಗಿಂತ ಹೆಚ್ಚಿನ ಕೃಷಿ ಮತ್ತು ತೋಟಗಾರಿಕ ಬೆಳೆಗಳು ಹಾನಿಗೂಳಗಾಗಿವೆ. ಹಾನಿಗೂಂಡ ಬೆಳೆಗಳ ಒಟ್ಟು ಮೌಲ್ಯ 35162.05 ಕೋಟಿ ರೂಪಾಯಿಗಳಾಗಿವೆ. ಕೇಂದ್ರದಿAದ ಬಂದ 10 ಸದಸ್ಯರ ಅಧ್ಯಯನ ತಂಡ ಬರ ಪರಿಸ್ಥಿತಿ ವಿಕ್ಷಣೆ ವೇಳೆ ನಮ್ಮಲ್ಲಿ ಬಂದಿರುವುದು ಹಸಿರು ಬರ ಎಂಬುವುದನ್ನು ಮನಗೊಳ್ಳಲು ವಿಫಲವಾಗಿದೆ. 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶಿಫಾರಸು ಮಾಡಿರುವ 5,495 ಕೋಟಿ ವಿಶೇಷ್ ಅನುದಾನವನ್ನು ಕರ್ನಾಟಕದಿಂದಲೆ ರಾಜ್ಯಸಭೆಗೆ ಆಯ್ಕೆಯಾಗಿ ವಿತ್ತ ಸಚಿವರಾಗಿರುವ ನಿರ್ಮಲಾ ಸೀತಾರಾಮನ ಅವರೆ ತಿರಸ್ಕರಿಸಿದ್ದಾರೆ. ಇದನೆಲ್ಲಾ ರಾಜ್ಯ ಸರಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಅತೀ ಶೀಘ್ರದಲ್ಲಿ ಅವರು ಈ ಬಗ್ಗೆ ಕಾರ್ಯಾಚರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು Dr. B.K.ವಿಶುಕುಮಾರ ಹೇಳಿದರು.
ಖಲಂದರ್ ಎಲಿಮಲೆ ಪ್ರಧಾನ ಕಾರ್ಯದರ್ಶಿ, ಶಾನನ್ ಪಿಂಟೋ ಸಂಘಟನಾ ಕಾರ್ಯದರ್ಶಿ, ಜನಾರ್ದನ ಬಂಗೇರ ಸಂಘಟನಾ ಕಾರ್ಯದರ್ಶಿ, ಶ್ರೀಮತಿ ವಿದ್ಯಾ ರಾಕೇಶ್ ಅಧ್ಯಕ್ಷೆ ಜಿಲ್ಲಾ ಮಹಿಳಾ ಘಟಕ, ಕಬೀರ್ ಕಾಟಿಪಳ್ಳ ಜಿಲ್ಲಾ ಕಾರ್ಯದರ್ಶಿ, ಶ್ರೀಮತಿ ಸೀಮಾ ಮಡಿವಾಳ್ ಜಿಲ್ಲಾ ಕಾರ್ಯದರ್ಶಿ, ಶ್ರೀಮತಿ ಗ್ಲಾವಿನ್ ಡಿಸೋಜಾ ಜಿಲ್ಲಾ ಕಾರ್ಯದರ್ಶಿ, ಶ್ರೀಮತಿ ಫ್ಲೋರಿನ್ ಗೋವಸ್ ಜಿಲ್ಲಾ ಕಾರ್ಯದರ್ಶಿ, ಥಾಮಸ್ ಮಥಿಯಾಸ್ ಜಿಲ್ಲಾ ಕಾರ್ಯದರ್ಶಿ, ದೇವಿಪ್ರಸಾದ್ ಬಜಿಲಕೇರಿ ಜಿಲ್ಲಾ ಸಾಮಾಜಿಕ ಮಾಧ್ಯಮ ಉಸ್ತುವಾರಿ, ರಾಜ್ಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ನವಿನಕುಮಾರ್ ಪೂಜಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ರಾಜ್ಯ ಉಪಾಧ್ಯಕ್ಷರು ವಿವೇಕಾನಂದ ಸಾಲಿನ್ಸ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.