ನೆಲ್ಯಾಡಿ: ಬೆಥನಿ ವಿದ್ಯಾಸಂಸ್ಥೆಯಲ್ಲಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಡಿ.2 ರಂದು ಬೆಥನಿ ಕ್ರೀಡಾಂಗಣದಲ್ಲಿ ನೆರವೇರಿತು.
ಉಪ್ಪಿನಂಗಡಿ ಆರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಜೇಶ್ ಕೆ.ವಿ ಅವರು ಕ್ರೀಡಾಧ್ವಜವನ್ನು ಹಾರಿಸಿ, ಕ್ರೀಡೆಯು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕಾರಣವಾಗಿರುತ್ತದೆ, ವಿದ್ಯಾರ್ಥಿಗಳಿಗೆಲ್ಲರಿಗೂ ಲವಲವಿಕೆಯನ್ನು ಉಂಟುಮಾಡುವ ಸ್ಥಳ ಕ್ರೀಡಾಂಗಣವಾಗಿದೆ, ಕ್ರೀಡೆಯು ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಪೂರ್ತಿ, ಶಿಸ್ತುಗಳನ್ನು ಬೆಳೆಸುತ್ತದೆ ಎಂದು ಮುಖ್ಯ ಅತಿಥಿಗಳ ಸ್ಥಾನದಿಂದ ಮಾತನಾಡಿದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಕೋಶಾಧಿಕಾರಿ ರೆ.ಫಾ.ಜೈಸನ್ ಸೈಮನ್ ವಹಿಸಿದ್ದರು. ವೇದಿಕೆಯಲ್ಲಿ ರೆ.ಫಾ.ಜೋಬ್ ಮ್ಯಾಥ್ಯೂ, ರೆ.ಫಾ.ಜೇಮ್ಸ್ ತೋಮಸ್, ಪ್ರಾಂಶುಪಾಲರಾದ ಜೋಸ್. ಎಮ್.ಜೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಮುಖ್ಯಗುರುಗಳಾದ ಜಾರ್ಜ್.ಕೆ ತೋಮಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಬಿನ್ಸಿ ಸ್ವಾಗತಿಸಿದರು. ಲಿಯೋ ಮ್ಯಾಥ್ಯೂ ವಂದಿಸಿದರು. ಸೋನಾಮರಿಯಾ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ಪಥಸಂಚಲನ ಹಾಗೂ ಪೋಷಕರಿಗೆ ಕ್ರೀಡಾಕೂಟ ನಡೆಯಿತು.