ಅನ್ನಭಾಗ್ಯದ DBT ಹಣ ಇದುವರೆಗೆ ರೇಷನ್ ಕಾರ್ಡ್‌ನಲ್ಲಿ ನಮೂದಾಗಿದ್ದ ಮುಖ್ಯಸ್ಥರಿಗೆ ಬರುತ್ತಿತ್ತು. ಆದ್ರೆ ತಾಂತ್ರಿಕ ದೋಷದಿಂದ ರಾಜ್ಯದಲ್ಲಿ ಸುಮಾರು 9 ಲಕ್ಷ ಅರ್ಹ ಫಲಾನುಭವಿಗಳು ಈ ಯೋಜನೆಯಿಂದ ವಂಚಿತರಾಗಿದ್ರು. ಈಗ ಇಲಾಖೆ ಇವರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ.
ಅನೇಕರಿಗೆ ಅನ್ನಭಾಗ್ಯದ ದುಡ್ಡು ಖಾತೆಗೆ ಜಮೆಯಾಗಿದ್ರೂ ಕೆಲವು ರೇಷನ್ ಕಾರ್ಡ್‌ನ ಮುಖ್ಯಸ್ಥರಿಗೆ ತಾಂತ್ರಿಕ ದೋಷದಿಂದ ದುಡ್ಡು ಜಮೆಯಾಗಿರಲಿಲ್ಲ. ಹೀಗಾಗಿ ಸರ್ಕಾರದ ಅನುಮತಿ ಪಡೆದು ಆಹಾರ ಇಲಾಖೆ ಮನೆಯ 2ನೇ ಯಜಮಾನರ ಬ್ಯಾಂಕ್ ಖಾತೆಗೆ (Bank Account) ನೇರವಾಗಿ ಹಣ ಹಾಕಲಿದೆ. ಈ ತಿಂಗಳಿಂದಲೇ ಮನೆಯ 2ನೇ ಯಜಮಾನರ ಖಾತೆಗೆ ದುಡ್ಡು ಹೋಗಲಿದೆ.
ಹಾಗಿದ್ರೇ ಈ ಪ್ರಕ್ರಿಯೆ ಹೇಗೆ ನಡೆಯಲಿದೆ ಎಷ್ಟು ಜನರಿಗೆ ಈ ಸೌಲಭ್ಯ ಸಿಗಲಿದೆ ಸಾರ್ವಜನಿಕರು ಏನು ಮಾಡಬೇಕು ವಿವರ ಇಲ್ಲಿದೆ.
ಒಟ್ಟು 9 ಲಕ್ಷ ಜನರಿಗೆ ಇದುವರೆಗೆ ಅನ್ನಭಾಗ್ಯದ ದುಡ್ಡು ಜಮೆಯಾಗಿಲ್ಲ. ಈ ಫಲಾನುಭವಿಗಳ ರೇಷನ್ ಕಾರ್ಡ್ ನಲ್ಲಿದ್ದ ಮನೆಯ ಹಿರಿಯ ಸದಸ್ಯರ ಆಕೌಂಟ್ ನಿಷ್ಕ್ರಿಯ, ಆಧಾರ್ ಸೀಡಿಂಗ್ ಸಮಸ್ಯೆ ಕೆವೈಸಿ ಸಮಸ್ಯೆ ಇತ್ತು. ಆದ್ದರಿಂದ ಈ ವಿವರವನ್ನು ಈಗಾಗಲೇ ಆಹಾರ ಇಲಾಖೆ ಕಲೆ ಹಾಕಿದೆ. ಹೀಗಾಗಿ ಈ ತಿಂಗಳಿಂದಲೇ ಬಿಪಿಎಲ್ ಕಾರ್ಡ್ ದರರ ತಾಂತ್ರಿಕ ದೋಷವಿರುವ ರೇಷನ್ ಕಾರ್ಡ್‌ನ 2ನೇ ಯಜಮಾನರ ಬ್ಯಾಂಕ್ ಖಾತೆಗೆ ದುಡ್ಡು ಜಮೆಯಾಗಲಿದೆ. ಇದಕ್ಕೆ ಸಾರ್ವಜನಿಕರು ಅರ್ಜಿ ಸಲ್ಲಿಕೆ ಮಾಡಬೇಕಾಗಿಲ್ಲ. ಆಹಾರ ಇಲಾಖೆಯ ಅಧಿಕಾರಿಗಳ ಬಳಿ ಎಲ್ಲಾ ಮಾಹಿತಿ ಇರಲಿದೆ ಎಂದು ಆಹಾರ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ ತಿಳಿಸಿದ್ದಾರೆ.