ಶಿಬಾಜೆ: ಜಮೀನಿಗೆ ಅಕ್ರಮ ಪ್ರವೇಶ; ಅವಾಚ್ಯ ಶಬ್ದಗಳಿಂದ ನಿಂದನೆ

ಶೇರ್ ಮಾಡಿ

ಬೆಳ್ತಂಗಡಿ ತಾಲೂಕು ಶಿಬಾಜೆ ಗ್ರಾಮದ ನಿವಾಸಿ ಸನೋದ್‌ ಟಿ.ಎಂ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅಳವಡಿಸಿದ ಮರದ ಬೇಲಿಯನ್ನು ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಅಡಿಕೆ ಮರದಿಂದ ಅಡಿಕೆಗಳನ್ನು ತೆಗೆದು ಸುಮಾರು ರೂ.4700 ಮೌಲ್ಯದ ಎರಡು ಗೋಣಿಚೀಲದಷ್ಟು ಅಡಿಕೆ ಕಳವು ಮಾಡಿರುವ ಬಗ್ಗೆ ಡಿ.9 ರಂದು ಬೆಳಗ್ಗೆ ನಡೆದಿದೆ.

ಈ ಬಗ್ಗೆ ಆರೋಪಿಗಳಾದ ಸಿ.ಎಮ್.ಉಲಹನನ್, ಸಿ.ಎಂ ರಾಜು ಹಾಗೂ ಅನ್ನಮ್ಮ ಎಂಬವರ ಮೇಲೆ ಸನೋದ್.ಟಿ.ಎಂ ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 100/2023 ಕಲಂ: 447,379,504 ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

error: Content is protected !!