ಹಿಂದೂ ಯುವಕನನ್ನು ವರಿಸಿದ ಅನ್ಯಕೋಮಿನ ಯುವತಿ

ಶೇರ್ ಮಾಡಿ

ಹಿಂದೂ ಯುವಕ ಮತ್ತು ಅನ್ಯಕೋಮಿನ ಯುವತಿ ಪೊಲೀಸ್‌ ಠಾಣೆಯಲ್ಲೇ ಪರಸ್ಪರ ಹಾರ ಬದಲಿಸಿಕೊಂಡ ಘಟನೆ ಡಿ.4ರಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡ ತಾಲೂಕಿನ ಬಾಡ ಗ್ರಾಮದ ಮಂಜುನಾಥ ಹಾಗೂ ಉಮಾ (ಹೆಸರು ಬದಲಿಸಲಾಗಿದೆ) 6 ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿ ಮನೆಯವರ ವಿರೋಧವಿದ್ದ ಕಾರಣ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡು ಊರು ಬಿಟ್ಟು ಹೋಗಿದ್ದರು.ಯುವತಿ ನಾಪತ್ತೆ ಬಗ್ಗೆ ಆಕೆಯ ಮನೆಯವರು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರೇಮಿಗಳು ಸ್ವಯಂಪ್ರೇರಿತರಾಗಿ ಠಾಣೆಗೆ ಬಂದು ಹಾಜರಾಗಿದ್ದರು. ಬಳಿಕ ಪೊಲೀಸರು ಯುವತಿಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು.

ವಿಷಯ ತಿಳಿದು ಠಾಣೆಗೆ ಬಂದ ಬಜರಂಗದಳ ಕಾರ್ಯಕರ್ತರು, ಪ್ರೇಮಿಗಳನ್ನು ಒಂದು ಮಾಡಬೇಕೆಂದು ಠಾಣೆ ಎದುರು ಪ್ರತಿಭಟಿಸಿದ್ದರು. ಬಳಿಕ ಪೊಲೀಸರು ಯುವತಿಯನ್ನು ಕರೆತಂದು ಯುವಕನ ಜತೆ ಹೋಗಲು ಅವಕಾಶ ಮಾಡಿಕೊಟ್ಟರು. ಬಜರಂಗದಳದ ಕಾರ್ಯಕರ್ತರು ಇಬ್ಬರೂ ಪ್ರೇಮಿಗಳಿಗೆ ಠಾಣೆಯಲ್ಲೇ ಪರಸ್ಪರ ಹಾರ ಬದಲಿಸುವ ಮೂಲಕ ಮದುವೆ ಮಾಡಿಸಿದ್ದಾರೆ.

Leave a Reply

error: Content is protected !!