ತುಂಬಾನೆ ಇಷ್ಟಪಟ್ಟ ವ್ಯಕ್ತಿ ನಿಮ್ಮನ್ನ ರಿಜೆಕ್ಟ್ ಮಾಡಿದ್ರಾ? ಏನು ಮಾಡಬಹುದು?

ಶೇರ್ ಮಾಡಿ

ತಿರಸ್ಕಾರವು ಜೀವನದ ಒಂದು ಭಾಗ. ಅದನ್ನು ಸ್ವೀಕರಿಸೋದು ನಾವು ಅಂದುಕೊಂಡಷ್ಟು ಸುಲಭ ಅಲ್ಲ. ಆದರೆ ನೀವು ರಿಜೆಕ್ಷನ್ ನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ನಿಮ್ಮ ಭವಿಷ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಈ ಬಗ್ಗೆ ಸ್ವಲ್ಪ ಡಿಟೇಲ್ ಆಗಿ ತಿಳಿಯೋಣ.

ರಿಜೆಕ್ಷನ್ ಅಥವಾ ತಿರಸ್ಕಾರ ಅನ್ನೋದು ತುಂಬಾನೆ ನೋವಿನಿಂದ ಕೂಡಿರುತ್ತೆ. ಆದರೆ ಇದರರ್ಥ ಈಗ ನಮ್ಮ ಜೀವನದಲ್ಲಿ ಏನೂ ಉಳಿದಿಲ್ಲ ಎಂದಲ್ಲ. ವಾಸ್ತವವಾಗಿ, ನಮ್ಮಲ್ಲಿ ಹೆಚ್ಚಿನವರು ಜೀವನದ ಒಂದಲ್ಲ ಒಂದು ಹಂತದಲ್ಲಿ ರಿಜೆಕ್ಷನ್ ಗೆ ಒಳಗಾಗಿದ್ದಾರೆ. ತಿರಸ್ಕಾರವು ಕೇವಲ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸೇರದಿರುವ ವಿಷಯವಲ್ಲ, ಕೆಲವೊಮ್ಮೆ ಈ ರಿಜೆಕ್ಷನ್ ಅನ್ನೋದು ಜೀವನವನ್ನೇ ಹಾಳು ಮಾಡುತ್ತದೆ.

ಹೆಚ್ಚಾಗಿ ಏನಾಗುತ್ತೆ ಅಂದ್ರೆ ಒಬ್ಬ ವ್ಯಕ್ತಿಯಿಂದ ನಾವು ತಿರಸ್ಕೃತರಾದಾಗ, ನಮ್ಮ ಜೀವನವನ್ನೇ ಕಳೆದುಕೊಂಡಂತೆ ಹೆಚ್ಚಿನ ಜನ ಮಂಕಾಗಿ ಬಿಡುತ್ತಾರೆ. ಆ ದುಃಖದಿಂದ ಚೇತರಿಸಿಕೊಳ್ಳಲು ಅಥವಾ ತನ್ನ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಾಗದಷ್ಟು ಕೊರಗುತ್ತಾರೆ. ಅಂತಹ ಜನರು ತಿರಸ್ಕಾರವನ್ನು ಜೀವನದ ಒಂದು ಭಾಗದಂತೆ ಸ್ವೀಕಾರ ಮಾಡಬೇಕು ಅನ್ನೋದನ್ನು ಅರ್ಥ ಮಾಡಿಕೊಳ್ಳೋದು ಬಹಳ ಮುಖ್ಯ ಎಂಬುದನ್ನು ಮರೆತು ಬಿಡುತ್ತಾರೆ. ತಿರಸ್ಕಾರ ಭಾವದಿಂದ ಹೊರ ಬರೋದು ಹೇಗೆ? ತಿಳಿಯಿರಿ…

ಭಾವನೆಗಳನ್ನು ಸ್ವೀಕರಿಸಿ
ತಿರಸ್ಕಾರದ ಸಮಯದಲ್ಲಿ, ನಕಾರಾತ್ಮಕ ಆಲೋಚನೆಗಳ ಪ್ರವಾಹ ಮನಸ್ಸಿನಲ್ಲಿ ಧಾವಿಸಿ ಬರುತ್ತೆ ಅನ್ನೋದನ್ನು ನೀವು ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿರಬೇಕು. ಈ ಸಮಯದಲ್ಲಿ, ಅಂತಹ ವಿಷಯಗಳು ತಮ್ಮನ್ನು ತಾವು ಪ್ರಾಬಲ್ಯಗೊಳಿಸಲು ಪ್ರಾರಂಭಿಸುತ್ತವೆ, ಅವುಗಳನ್ನು ಸ್ವೀಕರಿಸುವುದು ಸಹ ಕಷ್ಟ.ಅಂತಹ ಪರಿಸ್ಥಿತಿಯಲ್ಲಿ, ಅತ್ಯಂತ ಮುಖ್ಯವಾದ ವಿಷಯವೆಂದರೆ ಮೊದಲು ನಿಮ್ಮ ಭಾವನೆಗಳನ್ನು ಸ್ವೀಕರಿಸುವುದು. ನೀವು ಮಾನಸಿಕವಾಗಿ ನಿಮ್ಮನ್ನು ಬಲಪಡಿಸಿಕೊಳ್ಳದಿದ್ದರೆ, ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ.

ಇತರ ವಿಷಯಗಳ ಕಡೆಗೆ ಗಮನ ಹರಿಸಿ
ತಿರಸ್ಕಾರವು ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿಮಗೆ ಸಂತೋಷ ಮತ್ತು ಆರಾಮವನ್ನು ನೀಡುವ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಉತ್ತಮ. ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಎಲ್ಲದಕ್ಕೂ ಸಮಯ ತೆಗೆದುಕೊಳ್ಳುತ್ತದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಕೆಲವು ವಿಷಯಗಳು ಸಮಯದೊಂದಿಗೆ ತಾವಾಗಿಯೇ ಸರಿ ಹೋಗುತ್ತವೆ. ಆದರೆ ಇದಕ್ಕಾಗಿ, ನೀವು ಅವರಿಂದ ದೂರವಿರಬೇಕು.

ಒಂಟಿತನವು ಕೆಟ್ಟ ಪರಿಣಾಮವನ್ನು ಬೀರುತ್ತದೆ
ರಿಜೆಕ್ಟ್ ಆದ ನಂತರ, ಒಬ್ಬರಿಗೆ ಏಕಾಂಗಿಯಾಗಿ ವಾಸಿಸಬೇಕು ಅನಿಸುತ್ತದೆ ಎಂಬುದು ನಿಜ. ಯಾರ ಜೊತೆ ಮಾತನಾಡಲು ಅಥವಾ ಭೇಟಿಯಾಗಲು ಬಯಸೋದೆ ಇಲ್ಲ. ಇದು ತುಂಬಾ ತಪ್ಪು. ಏಕೆಂದರೆ ಒಂಟಿತನವು ನಿಮ್ಮನ್ನು ಒಳಗಿನಿಂದ ದುರ್ಬಲಗೊಳಿಸುತ್ತದೆ. ಇದು ಮಾತ್ರವಲ್ಲ, ನೀವು ಒಬ್ಬಂಟಿಯಾಗಿ ವಾಸಿಸುತ್ತಿದ್ದರೆ, ನೀವು ಎಂದಿಗೂ ತಿರಸ್ಕಾರದ ಭಾವನೆಯಿಂದ ಹೊರಬರುವುದಿಲ್ಲ. ಈ ಸಮಯದಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಇರಿ. ಕೆಲವೊಮ್ಮೆ ಯಾರ ಜೊತೆಯೂ ಭಾವನೆಗಳನ್ನು ಹಂಚಿಕೊಳ್ಳಲು ಕಷ್ತವಾಗಬಹುದು. ಆದರೆ ಸಮಸ್ಯೆಯಿಂದ ಓಡಿ ಹೋಗಬೇಡಿ. ಸಮಸ್ಯೆಯನ್ನು ಎದುರಿಸಲು ಕಲಿಯಿರಿ.

ವೃತ್ತಿಪರರೊಂದಿಗೆ ಮಾತನಾಡಿ
ತಿರಸ್ಕಾರದ ಪರಿಣಾಮಗಳು ತುಂಬಾ ಗಂಭೀರವಾಗಿರಬಹುದು, ಇದರಿಂದಾಗಿ ನಿಮ್ಮ ಇಡೀ ಜೀವನವು ತೊಂದರೆಗೊಳಗಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ವೃತ್ತಿಪರರ ಬೆಂಬಲವು ಕೆಲವೊಮ್ಮೆ ತುಂಬಾ ಪ್ರಯೋಜನ ನೀಡುತ್ತೆ. ಅಂತಹ ಸಮಾಲೋಚನೆಯು ನೀವು ಒತ್ತಡದಲ್ಲಿ ಮಾಡುವ ಕೆಲಸಗಳಿಂದ ನಿಮ್ಮನ್ನು ದೂರವಿರಿಸುತ್ತದೆ.

Leave a Reply

error: Content is protected !!