“ಬುರ್ಖಾ ತೆಗೆದು ಬನ್ನಿ’ ಸೂಚನ ಫಲಕ: ತೆರವು

ಶೇರ್ ಮಾಡಿ

ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ಬುರ್ಕಾ ತೆಗೆದು ಬನ್ನಿ ಎಂಬ ಸೂಚನ ಫಲಕ ವಿವಾದಕ್ಕೀಡಾದ ಮತ್ತು ಸಾಮಾಜಿಕ ಜಾಲತಾಣದಲ್ಲೂ ಭಾರೀ ಚರ್ಚೆಯ ಬಳಿಕ ಸೂಚನ ಫಲಕವನ್ನು ತೆರವುಗೊಳಿಸಿದ ವಿದ್ಯಮಾನ ನಡೆದಿದೆ.

ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ರೋಗಿಗಳ ಇಸಿಜಿ ತೆಗೆಯುವ ರೂಮ್‌ ಬಾಗಿಲಿನಲ್ಲಿ ಈ ಫಲಕ ಅಳವಡಿಸಲಾಗಿತ್ತು. ಕಳೆದ ಒಂದು ವರ್ಷಗಳ ಹಿಂದೆ ಈ ಫಲಕ ಅಳವಡಿಸಲಾಗಿತ್ತು. ಯಾರೋ ಒಬ್ಬರು ಈ ಸೂಚನ ಫಲಕ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಚರ್ಚೆಗೆ ಕಾರಣವಾಯಿತು. ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಆಸ್ಪತ್ರೆಯವರು ಸೂಚನ ಫಲಕ ತೆರವುಗೊಳಿಸಿದ್ದಾರೆ.

Leave a Reply

error: Content is protected !!