ನೇಸರ ಫೆ.06: ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಅಂತರ್ ರಾಜ್ಯಮಟ್ಟದ ಹಗ್ಗಜಗ್ಗಾಟ ಕುಂಟಾಲಪಲ್ಕೆ ಶಾಲಾ ವಠಾರದಲ್ಲಿ ನಡೆಯಿತು. ಪಂದ್ಯಾಟವನ್ನು ಪ್ರಕಾಶ್ ಪಿಲಿಕಬೆ ಇವರು ಉದ್ಘಾಟಿಸಿ ಶುಭ ಹಾರೈಸಿದರು.ಅಶೋಕ್.ಬಿಡೆ ಪಂದ್ಯಾಟದ ಅಂಕಣವನ್ನು ಉದ್ಘಾಟಿಸಿ ಆಟಗಾರರಿಗೆ ಶುಭ ಹಾರೈ ಸಿದರು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹತ್ಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನವೀನ್, ಅತಿಥಿಗಳಾಗಿ ಧರ್ಮರಾಜ ಅಡ್ಕಾಡಿ, ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಗೌಡ ಉಪಸ್ಥಿತರಿದ್ದರು.ಗೌರವ ಅತಿಥಿಗಳಾಗಿ ಶ್ರೀಮತಿ ಉಷಾ.ವಿ,ಶ್ರೀಮತಿ ಸೌಮ್ಯ ತುಳುಪುಳೆ,ಸುದರ್ಶನ ಆಚಾರ್ಯ,ಜಯಚಂದ್ರ ಗೌಡ ಬಲ್ಕಾಜೆ ಹಾಗೂ ಶ್ರೀಮತಿ ಮಂಜುಳಾ ಕಾರಂತ್,ಹತ್ಯಡ್ಕ ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಶಕುಂತಲಾ ಆಚಾರ್ಯ ಉಪಸ್ಥಿತರಿದ್ದರು.
ಅಂತರರಾಜ್ಯ ಮಟ್ಟದ ನಿರೂಪಕರಾದ ಸುರೇಶ್ ಪಡಿಪಂಡ ಇವರನ್ನು ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ಸನ್ಮಾನಿಸಲಾಯಿತು. ಯುವಕ ಮಂಡ ಲದ ಕಾರ್ಯದರ್ಶಿಯಾದ ಸುಮಂತ್ ಅಳಕ್ಕೆ ಇವರು ಸ್ವಾಗತಿಸಿ, ಶ್ರೀವತ್ಸ ಗೋಖಲೆ ವಂದಿಸಿದರು. ವೃಕ್ಷವರ್ಧನ ಗೋಖಲೆ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾಟದಲ್ಲಿ ಪುರುಷರ 510 ಕೆಜಿ ವಿಭಾಗ, ಪುರುಷರ 8 ಜನರ ಓಪನ್ ಮಾದರಿಯ ಹಗ್ಗಜಗ್ಗಾಟ, ಮಹಿಳೆಯರ 8 ಜನರ ಓಪನ್ ಮಾದರಿಯ ಹಗ್ಗಜಗ್ಗಾಟ ಹಾಗೂ ವಲಯ ಮಟ್ಟದ ಪುರುಷರ 8 ಜನರ ಓಪನ್ ಮಾದರಿಯ ಹಗ್ಗಜಗ್ಗಾಟ ಪಂದ್ಯಗಳು ನಡೆದವು.
ಲೆವೆಲ್ 510+5 ಕೆಜಿ ವಿಭಾಗದಲ್ಲಿ
ಪ್ರಥಮ ವನದುರ್ಗಾ ಪೆರ್ಮುದೆ,ದ್ವಿತೀಯ ಹಿಂದೂಜಾಗರಣ ವೇದಿಕೆ ಶಿವಾಜಿನಗರ ಸುಳ್ಯ,ತೃತೀಯ S.F ಮನಿಯಂಪಾರೆ,ಚತುರ್ಥ ಕಪಿಲ ಕೇಸರಿ ಯುವಕ ಮಂಡಲ ಕುಂಟಾಲಪಳಿಕೆ.
ಲೆವೆಲ್ ಮಾದರಿಯ ಓಪನ್ ಹಗ್ಗಜಗ್ಗಾಟ ವಿಭಾಗದಲ್ಲಿ
ಪ್ರಥಮ ಜೈ ಆಂಜನೇಯ ಕಣ್ವತೀರ್ಥ,ದ್ವಿತೀಯ ಶಾಸ್ತಾವು ಕಡಂಬಾರು,ತೃತೀಯ – ಶಿವಶಕ್ತಿ ಫ್ರೆಂಡ್ಸ್, ಕಳೆಂಜ,ಚತುರ್ಥ ಶಿವಾಜಿ ಗೆಳೆಯರ ಬಳಗ,ಕೊಕ್ಕಡ.
ಮಹಿಳೆಯರ ವಿಭಾಗದಲ್ಲಿ ಎರಡು ಪ್ರಶಸ್ತಿಗಳನ್ನು ಜೈ ಶ್ರೀರಾಮ್ ತಂಡ ಕೊಕ್ಕಡ ಪಡೆದುಕೊಂಡಿತು.
ವಲಯ ಮಟ್ಟದಲ್ಲಿ
ಪ್ರಥಮ ಶಿವಶಕ್ತಿ ಫ್ರೆಂಡ್ಸ್,ಕಳೆಂಜ ಸ್ಥಾನ,ದ್ವಿತೀಯ ಶಿವಾಜಿ ಗೆಳೆಯರ ಬಳಗ ಕೊಕ್ಕಡ ದ್ವಿತೀಯ ಸ್ಥಾನ ಗಳಿಸಿದರು.
ಪಂದ್ಯಾಟದಲ್ಲಿ ಸುಮಾರು 32 ತಂಡಗಳು ಭಾಗವಹಿಸಿದ್ದವು.ಸುರೇಶ್ ಪಡಿಪಂಡ ಇವರ ನಿರೂಪಣೆಯಲ್ಲಿ ಪಂದ್ಯಾಟವು ಅದ್ದೂರಿಯಾಗಿ ನಡೆಯಿತು.
🔔ಆಮಂತ್ರಣ🔔
🔔ಜಾಹೀರಾತು🔔