ಜೇಸಿಐ ಸಂಸ್ಥೆ ಯಲ್ಲಿ ಅನೇಕ ಅವಕಾಶಗಳಿವೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳಲು ಕರೆ ನೀಡಿದರು. -ರಾಷ್ಟ್ರೀಯ ತರಬೇತುದಾರ ಜೇಸಿ.ಸದಾನಂದ ನಾವಡ
ನೇಸರ ಫೆ.06: ಜೇಸಿಐ ಮೂಡುಬಿದಿರೆ ತ್ರಿಭುವನ್ ಆಶ್ರಯದಲ್ಲಿ ಮಿಜಾರಿನ ಮೈಟ್ ಕಾಲೇಜ್ ಸಭಾಂಗಣದಲ್ಲಿ ಫೆ.5 ಮತ್ತು ಫೆ.6 ರಂದು ನೆರವೇರಿತು.
ವಲಯ 15ರ ಆಡಳಿತ ವಿಭಾಗದ ನಿರ್ದೇಶಕ ಜೇಸಿ.ಪುರುಷೋತ್ತಮ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಜೇಸಿಐ ವಲಯ 15ರ ವಲಯಾಧ್ಯಕ್ಷ ಜೇಸಿ ಸೆನೆಟರ್ ರಾಯನ್ ಉದಯ ಕ್ರಾಸ್ತ ಕಮ್ಮಟವನ್ನು ಉದ್ಘಾಟಿಸಿ,ಶುಭ ಹಾರೈಸಿದರು.ದಿಕ್ಸೂಚಿ ಭಾಷಣ ಮಾಡಿದ ಜೇಸಿಐ ರಾಷ್ಟ್ರೀಯ ತರಬೇತುದಾರ ಜೇಸಿ.ಸದಾನಂದ ಸದಾನಂದ ನಾವಡ ಪ್ರೀತಿ,ಸಂತೋಷದಿಂದ ಏನು ಬೇಕಾದರೂ ಕೆಲಸ ಮಾಡಿದರೆ ಜೀವನ ಆನಂದ ದಿಂದ ಇರುತ್ತದೆ, ತಮ್ಮ ಮನೆ, ತನ್ನ ಉದ್ಯೋಗವನ್ನು ಸಮತೋಲನದಿಂದ ಸರಿದೂಗಿಸಿಕೊಂಡು ಯಾರು ಹೋಗುತ್ತಾರೆ ಆಗ ಆತ ಉತ್ತಮ ನಾಯಕ ನಾಗು ತ್ತಾನೆ. ಜೇಸಿಐ ಸಂಸ್ಥೆ ಯಲ್ಲಿ ಅನೇಕ ಅವಕಾಶಗಳಿವೆ ಅವುಗಳನ್ನು ಸರಿಯಾಗಿ ಬಳಸಿಕೊಳ್ಳಲು ಕರೆ ನೀಡಿದರು.
ಮುಖ್ಯ ಅತಿಥಿ ಮೈಟ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್ ಗಣೇಶ್ ಪ್ರಸಾದ್ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದ ರು, ತರಬೇತುದಾರ ಪ್ರಮೋದ್ ಕುಮಾರ್, ಪ್ರಾಂತ್ಯ ವಲಯ ಉಪಾಧ್ಯಕ್ಷ ಜೇಸಿ.ಪ್ರಶಾಂತ ಲಾಯಿಲ, ಜೇಸಿಐ ಸಂಯೋಜಕ ಜಯೇಶ್ ಬರೆಟೊ,ನಿಕಟ ಪೂರ್ವ ವಲಯಾಧ್ಯಕ್ಷೆ ಜೇಸಿ.ಸೆನೆಟರ್.ಸೌಜನ್ಯ ಹೆಗ್ದೆ, ಸಹ ತರಬೇತುದಾರರಾದ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್, ವಲಯ ತರಬೇತುದಾರ ಶ್ರೀಧರ ಪಿ.ಎಸ್, ಘಟಕಾಧ್ಯಕ್ಷೆ ಜೇಸಿ.ಶಾಂತಲಾ.ಎಸ್ ಆಚಾರ್ಯ, ಕಾರ್ಯದರ್ಶಿ ಜೇಸಿ.ಸುನಿಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಲಯ 15ರ ಉದಕ ಪತ್ರಿಕೆ ಸಂಪಾದಕ ಮಂಜುನಾಥ.ಕೆ, ಶಿವಪುರ ಇವರ ಸಾರಥ್ಯದಲ್ಲಿ ಮೂಡಿಬಂದ “ಉದಕ” ಪ್ರಥಮ ಸಂಚಿಕೆಯನ್ನು ಜೇಸಿಐ .ಸಂಯೋಜಕ ಜಯೇಶ್ ಬರೆಟೊ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ವಲಯ 15ರ ಪೂರ್ವ ಅಧ್ಯಕ್ಷರು,ವಲಯ ಉಪಾಧ್ಯಕ್ಷರುಗಳು,ವಲಯಾಧಿಕಾರಿಗಳು, ವಲಯದ ಎಲ್ಲಾ ಘಟಕಾಧಿಕಾರಿಗಳು ಉಪಸ್ಥಿತರಿದ್ದ ರು.ಜೇಸಿವಾಣಿ ಮೋಹನ್ ನೆಕ್ಕರೆ ವಾಚಿಸಿದರು, ಘಟಕಾಧ್ಯಕ್ಷ ಶಾಂತಲಾ.ಎ.ಸ್ ಆಚಾರ್ ಸ್ವಾಗತಿಸಿದರು,ಕಾರ್ಯದರ್ಶಿ ಸುನಿಲ್ ವಂದಿಸಿದರು.
🔔ಆಮಂತ್ರಣ🔔
🔔ಜಾಹೀರಾತು🔔