ಈ ಹೋಟೆಲ್ ರೂಮ್​​​ಗಳಲ್ಲಿ ಕಡ್ಡಾಯವಾಗಿ ಕಾಂಡೋಮ್ ಇಟ್ಟಿರಲೇಬೇಕಂತೆ; ಇದು ಸರ್ಕಾರದ ರೂಲ್ಸ್

ಶೇರ್ ಮಾಡಿ

ಇಂದು ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಲ್ಲದೆ ಅಸುರಕ್ಷಿತ ಲೈಂಗಿಕತೆಯ ಕಾರಣದಿಂದ ಏಡ್ಸ್ ರೋಗದ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಈ ರೋಗವನ್ನು ತಡೆಗಟ್ಟಲು ಹಾಗೂ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಕಾಂಡೋಮ್ ಬಳಕೆಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅದೇ ರೀತಿ ಉಗಾಂಡ ದೇಶದಲ್ಲಿಯೂ ಕೂಡಾ ಲೈಂಗಿಕವಾಗಿ ಹರಡುವಂತಹ ಸೋಂಕುಗಳನ್ನು ತಡೆಗಟ್ಟಲು ಹಾಗೂ ಜನಸಂಖ್ಯೆಯನ್ನು ನಿಯಂತ್ರಿಸಲು ಇಲ್ಲಿನ ಸರ್ಕಾರ ವಿಶೇಷ ಉಪಕ್ರಮವನ್ನು ತಗೆದುಕೊಂಡಿದೆ. ಅದೇನೆಂದರೆ, ಈ ದೇಶದ ಪ್ರತಿಯೊಂದು ಹೋಟೆಲ್ ರೂಮ್​​​ಗಳಲ್ಲಿಯೂ ಕಡ್ಡಾಯವಾಗಿ ಫ್ರೀ ಕಾಂಡೋಮ್​​​ಗಳನ್ನು ಇಟ್ಟಿರಲೇಬೇಕು ಎಂಬ ಕ್ರಮವನ್ನು ತೆಗೆದುಕೊಂಡಿದೆ. ಹೋಟೇಲ್​​​ಗಳಲ್ಲಿ ತಂಗುವಂತಹ ದಂಪಂತಿಗಳಿಗಾಗಿ ಈ ಒಂದು ವಿಶೇಷ ಕ್ರಮವನ್ನು ತೆಗೆದುಕೊಳ್ಳಲಾಗಿದೆ, ಈ ಮಾಹಿತಿಪೂರ್ಣ ವಿಡಿಯೋವನ್ನು ಟ್ರಾವೆಲ್ ವ್ಲಾಗರ್ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ.

ಈ ವೈರಲ್ ವಿಡಿಯೋವನ್ನು ಶಬೀರ್ ಅಹಮದ್ ಎಂಬ ಟ್ರಾವೆಲ್ ವ್ಲಾಗರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಉಗಾಂಡ ದೇಶದ ಹೋಟೆಲ್ ರೂಮ್​​ಗಳಲ್ಲಿ ಏತಕ್ಕಾಗಿ ಫ್ರೀ ಕಾಂಡೋಮ್​​​ಗಳನ್ನು ಇಟ್ಟಿದ್ದಾರೆ ಎಂಬುದಕ್ಕೆ ವಿವರಣೆಯನ್ನು ನೀಡುವುದನ್ನು ಕಾಣಬಹುದು.

ಹೋಟೆಲ್​​​​ಗಳಲ್ಲಿ ತಂಗುವ ದಂಪತಿಗಳ ಸಲುವಾಗಿ ಇಲ್ಲಿನ ಪ್ರತಿಯೊಂದು ಹೋಟೆಲ್​​​​ಗಳಲ್ಲಿ ಫ್ರೀ ಕಾಂಡೋಮ್​​​ಗಳನ್ನು ಇಡಲಾಗಿದೆ. ಇದು ಜನಸಂಖ್ಯೆಯನ್ನು ನಿಯಂತ್ರಿಸಲು ಇಲ್ಲಿನ ಸರ್ಕಾರ ತಗೆದುಕೊಂಡಂತಹ ವಿಶೇಷ ಕ್ರಮವಾಗಿದೆ ಎಂದು ಅವರು ವಿಡಿಯೋದಲ್ಲಿ ವಿವರಣೆಯನ್ನು ನೀಡಿದ್ದಾರೆ.

ಡಿಸೆಂಬರ್ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 19.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 360K ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್​​​​ ಕೂಡ ಬಂದಿವೆ. ಒಬ್ಬ ಬಳಕೆದಾರರು ʼಜೊತೆಗೆ ಸ್ಯಾನಿಟರಿ ಪ್ಯಾಡ್​​ಗಳನ್ನು ಸಹ ಇಡಬಹುದಲ್ವಾʼ ಎಂದು ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಕೆಲವರು ಈ ವಿಡಿಯೋಗೆ ತಮಾಷೆಯ ಕಮೆಂಟ್ಸ್ಗಳನ್ನು ಬರೆದುಕೊಂಡರೆ, ಇನ್ನೂ ಅನೇಕರು ಇದೊಂದು ಒಳ್ಳೆಯ ಉಪಕ್ರಮ, ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದೀರಿ ಎಂದು ಹೇಳಿದ್ದಾರೆ.

Leave a Reply

error: Content is protected !!