ಕಿರಣ್ ಮಹಿಳಾ ತಾಲೂಕು ಒಕ್ಕೂಟ(ರಿ) ಕಡಬ -ಮಹಾಸಭೆ ಹಾಗೂ ಮಾಧ್ಯಮ ಶಿಕ್ಷಣ ತರಬೇತಿ

ಶೇರ್ ಮಾಡಿ

ನೆಲ್ಯಾಡಿ: ಸಾಮಾಜಿಕ ಜಾಲತಾಣಗಳು ವಿನಿಯೋಗದ ಮಾಧ್ಯಮಗಳು. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಘಟನೆಗಳು ಮತ್ತು ಹಾಗು ಹೋಗು ಗಳನ್ನು ಸಾಮಾಜಿಕ ಜಾಲ ತಾಣಗಳ ಮೂಲಕ ತಿಳಿಯಬಹುದು, ಸಾಮಾಜಿಕ ಜಾಲ ತಾಣದಿಂದ ಪ್ರಯೋಜನಗಳು ಹಾಗೂ ದುಷ್ಪರಿಣಾಮಗಳು ಇವೆ, ಇವುಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವುದು ಉತ್ತಮ ಎಂದು ಸಂತ ಆಲ್ಫೋನ್ಸ ಚರ್ಚಿನ ಧರ್ಮ ಗುರುಗಳು ವಂದನೀಯ ಫಾದರ್ ಶಾಜಿ ಮ್ಯಾಥ್ಯೂ ರವರು ನೆಲ್ಯಾಡಿ ಚರ್ಚ್ ಸಭಾಭವನದಲ್ಲಿ ಆಯೋಜಿಸಿದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ರಾದ ಶ್ರೀಮತಿ ಡೈಸಿ ಜೋಯ್ ವಹಿಸಿದ್ದರು. ಡಿ.ಕೆ.ಆರ್. ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಎ. ಜೆ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಒಕ್ಕೂಟದ ಹಿಂದಿನ ಸಭೆಯ ವರದಿಯನ್ನು ಹಾಗೂ ಒಕ್ಕೂಟದ ವತಿಯಿಂದ ಆಯೋಜಿಸಿದ ಕಾರ್ಯಕ್ರಮಗಳ ವರದಿಯನ್ನು ಕಾರ್ಯದರ್ಶಿ ಶ್ರೀಮತಿ ವಲ್ಸಮ್ಮ ಎ.ಜೇ ರವರು ಮಂಡಿಸಿದರು. ಒಕ್ಕೂಟದ ಲೆಕ್ಕ ಪರಿಶೋಧನಾ ವರದಿಯನ್ನು ಯೋಜನಾ ಸಂಯೋಜಕಿ ಶ್ರೀಮತಿ ಸಿಸಿಲ್ಯಾ ತಾವ್ರೋರವರು ಮಂಡಿಸಿದರು. ಮುಂದೆ ಮಾಡಲಾಗುವ ಕಾರ್ಯಕ್ರಮಗಳ ಬಗ್ಗೆ ಕ್ರಿಯಾಯೋಜನೆ ತಯಾರಿಸಲಾಯಿತು.

ಒಕ್ಕೂಟದ ಸದಸ್ಯರಾದ ಶ್ರೀಮತಿ ಜೆಸ್ಸಿ ಹಾಗೂ ಚಿನ್ನಮ್ಮರವರು ಪ್ರಾರ್ಥನೆ ನಡೆಸಿಕೊಟ್ಟರು. ಉಪಾಧ್ಯಕ್ಷರಾದ ಶ್ರೀಮತಿ ಗ್ರೇಸಿ ಪಿಂಟೋ ಎಲ್ಲರನ್ನು ಸ್ವಾಗತಿಸಿದರು. ಕೋಶಾಧಿಕಾರಿ ಶ್ರೀಮತಿ ಸೂಸಮ್ಮ ವಂದಿಸಿದರು. ಸದಸ್ಯೆ ಶ್ರೀಮತಿ ರೆಬೇಕಾರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಯಶಸ್ವಿಗೆ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು ಭಾಗಹಿಸಿದ್ದರು.

Leave a Reply

error: Content is protected !!