ಪಿಯು ವಿದ್ಯಾರ್ಥಿ ಆತ್ಮಹತ್ಯೆ

ಶೇರ್ ಮಾಡಿ

ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದಿದೆ.

ಮನೋಜ್ (18) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತರ್ಚಿಹಾಳ ಮೂಲದ ಮಲ್ಲಪ್ಪ ಎಂಬುವರ ಮಗ. ಮನೋಜ್ ಮೂಡಬಿದ್ರೆಯ ಖಾಸಗಿ ಕಾಲೇಜ್ ಆಳ್ವಾಸ್ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.

ಮನೋಜ್ ಇಂದು ಕಾಲೇಜಿನ ಹಾಸ್ಟೆಲ್ ಬಾತ್‌ರೂಂ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಯ ಹಿಂದಿನ ಕಾರಣಗಳು ತಿಳಿದು ಬಂದಿಲ್ಲ. ತಾವು ಬರುವವರೆಗೂ ಶವ ಹೊರ ತೆಗೆಯದಂತೆ ಪಟ್ಟು ಹಿಡಿದಿರುವ ಮನೋಜ್ ಪೋಷಕರು ಘಟನೆ ತಿಳಿದ ಕೂಡಲೇ ಹಾಸ್ಟೆಲ್‌ನತ್ತ ದೌಡಾಯಿಸಿದ್ದಾರೆ.

ಪೋಷಕರು ಮನೋಜ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

error: Content is protected !!