ಹಿಂದೂ-ಮುಸ್ಲಿಂ ಎಂದು ಹೊಡೆದಾಡುವವರಿಗೆ, ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣ ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಸಂದೇಶ ಸಾರಿದೆ. ಅಯ್ಯಪ್ಪ ಮಾಲಾಧಾರಿಗಳಿಗೆ ಮುಸಲ್ಮಾನರ ಮನೆಯಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಮುಸ್ಲಿಂ ಮುಖಂಡರಾದ ಬಿ.ಎ.ಕರೀಮ್ ಸಾಬ್ ಮನೆಯಲ್ಲಿ 50ಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಪೂಜೆ ನಂತರ ತಾವೇ ಖುದ್ದಾಗಿ ಪ್ರಸಾದ ಬಡಿಸಿದ್ದಾರೆ.