ಮಹಿಳೆಯ ಮೇಲೆ ಹಲ್ಲೆ: ದೂರು ದಾಖಲು

ಶೇರ್ ಮಾಡಿ

ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿ ಗಂಗಾಧರ ಅವರ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಹಿನಿ ನೆಕ್ಕರಾಜೆ ‌ದೂರು ನೀಡಿದ್ದು, ತನ್ನ ಜಮೀನಿನಲ್ಲಿ ಸುಮಾರು 10 ದಿನಗಳಿಂದ ಹಿಟಾಚಿ ಯಂತ್ರದಲ್ಲಿ ಕೆಲಸ ನಡೆಯುತ್ತಿದೆ. ಡಿ.8ರಂದು ರಾತ್ರಿ 8 ಗಂಟೆಗೆ ಹಿಟಾಚಿ ಅಪರೇಟರ್‌ ಬರಮಪ್ಪ ಅವರು ಕೆಲಸ ಮುಗಿಸಿ ಹಿಟಾಚಿಯಿಂದ ಹೊರ ಬಂದಾಗ ನೆರೆಮನೆಯ ಗಂಗಾಧರ ಆತನ‌ನ್ನು ತಡೆದು ನಿಲ್ಲಿಸಿ, ನೀನು ಯಾಕೆ ನಮ್ಮ ಮಣ್ಣಿನ ಧರೆಯ ಮಣ್ಣು ತೆಗೆದದ್ದು ಯಾಕೆ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಆತನಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ. ಅಷ್ಟರಲ್ಲಿ ತಾನು ಅಲ್ಲಿಗೆ ಹೋದಾಗ ನನಗೂ ಕಲ್ಲಿನಿಂದ ಹಲ್ಲೆ ನಡೆಸಿ ನಿಂದಿಸಿದ್ದಲ್ಲದೆ ತಳ್ಳಿದ ಪರಿಣಾಮ ಹಿಟಾಚಿ ಮೇಲೆ ಬಿದ್ದಿದ್ದೇನೆ.

ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ. ತನ್ನ ಗಂಡ ಲೋಕೇಶ ಅವರ ಮೇಲೂ ಹಲ್ಲೆ ನಡೆದಿದೆ. ಕೂಡಲೇ ನನ್ನ ಮಗ ಭರತ ಬಂದಿದ್ದು ಆತನಲ್ಲಿ ನೀವಿನ್ನು ನನ್ನ ಮಣ್ಣಿನ ದರೆಯ ಬಳಿ ಕೆಲಸ ಮಾಡಿದರೆ ಕೊಲೆ ಮಾಡುತ್ತೇನೆ’ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!