ಪತ್ನಿ ತುಂಡುಡುಗೆ ಧರಿಸುತ್ತಾಳೆಂದು ಕತ್ತು ಸೀಳಿ ಕೊಲೆ ಮಾಡಿದ ಪತಿ

ಶೇರ್ ಮಾಡಿ

ತುಂಡುಡುಗೆ ಧರಿಸುತ್ತಾಳೆಂದು ಕತ್ತು ಸೀಳಿ ಪತ್ನಿಯನ್ನೇ ಪತಿ ಹತ್ಯೆಗೈದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಜ್ಯೋತಿ(22) ಕೊಲೆಯಾದ ಗೃಹಿಣಿ. ಜೀವನ್, ಕೊಲೆ ಮಾಡಿದ ಆರೋಪಿ. ತನ್ನ ಹೆಂಡತಿ ತುಂಡು ಬಟ್ಟೆ ಧರಿಸುತ್ತಾಳೆಂದು ಸಿಟ್ಟು ಮಾಡಿಕೊಂಡಿದ್ದ ಪತಿ ಆಕೆಯ ಜೊತೆ ಜಗಳವಾಡಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಪತ್ನಿಯನ್ನೇ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಧಾರವಾಡ ಮೂಲದ ಜ್ಯೋತಿ ಹಾಗೂ ಜೀವನ್ ಇಬ್ಬರೂ ಪರಸ್ಪರ ಪ್ರೀತಿಸಿ ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ಮನೆಯೊಂದರಲ್ಲಿ ವಾಸವಾಗಿದ್ದರು. ಜ್ಯೋತಿಗೆ ತುಂಡು ಬಟ್ಟೆ ಧರಿಸುವುದು, ಮಾಡರ್ನ್​ ಉಡುಪು ಧರಿಸುವುದು ಅಂದ್ರೆ ಇಷ್ಟ. ಆದರೆ ಜೀವನ್​ಗೆ ಅದು ಇಷ್ಟ ಆಗುತ್ತಿರಲಿಲ್ಲ. ಹೀಗಾಗಿ ಬಟ್ಟೆ ವಿಚಾರಕ್ಕೆ ಇವರಿಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಆದರೆ ನಿನ್ನೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.

ನಿನ್ನೆ ಕೂಡ ಜ್ಯೋತಿ ಮಾಡರ್ನ್​ ಉಡುಪು ಧರಿಸಿ ಆಚೆ ಹೊರಟಿದ್ದಳು. ಆಗ ಜೀವನ್, ನಾನೇ ಡ್ರಾಪ್​ ಮಾಡುತ್ತೇನೆಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಕುತ್ತಿಗೆ ಸೀಳಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಅರಸೀಕೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

error: Content is protected !!