ನೆಲ್ಯಾಡಿ: ಬೈಕ್‌ಗಳ ಡಿಕ್ಕಿ-ಇಬ್ಬರಿಗೆ ಗಾಯ

ಶೇರ್ ಮಾಡಿ

ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡಿರುವ ಘಟನೆ ಜ.8ರಂದು ಸಂಜೆ ನಡೆದಿದೆ.

ಬೈಕ್ ಸವಾರ ಗುಂಡ್ಯ ನಿವಾಸಿ ತೋಮಸ್ ಕೆ.ಪಿ.(58ವ.) ಹಾಗೂ ಸಹ ಸವಾರ ಸುಬ್ಬ ಎಂಬವರು ಗಾಯಗೊಂಡವರಾಗಿದ್ದಾರೆ.

ತೋಮಸ್ ಅವರು ತನ್ನ ಬೈಕ್ ಅಲ್ಲಿ ಪರಿಚಯದ ಸುಬ್ಬ ಎಂಬವರನ್ನು ಕುಳ್ಳಿರಿಸಿಕೊಂಡು ಗುಂಡ್ಯದಿಂದ ಶಿರಾಡಿ ಕಡೆಗೆ ಬರುತ್ತಿದ್ದು ಅಡ್ಡಹೊಳೆ ತಲುಪುತ್ತಿದ್ದಂತೆ ಎದುರುಗಡೆಯಿಂದ ಬರುತ್ತಿದ್ದ ಬೈಕ್‌ನ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ತೋಮಸ್ ಅವರ ಹಣೆಗೆ ಹಾಗೂ ಸುಬ್ಬ ಅವರ ಮುಖ, ತಲೆಗೆ ಗಾಯವಾಗಿದೆ. ಸುಬ್ಬ ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ತೋಮಸ್ ಅವರು ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ. ತೋಮಸ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!