ಅರಿಕೆಗುಡ್ಡೆ: ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಷಡಾಧಾರ ಪ್ರತಿಷ್ಠೆ,ನಿಧಿಕುಂಭ ಸ್ಥಾಪನೆ

ಶೇರ್ ಮಾಡಿ

ನೇಸರ ಫೆ.7: ನವೀಕರಣಗೊಳ್ಳುತ್ತಿರುವ ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಫೆ.7 ರಂದು ಷಡಾಧಾರ-ನಿಧಿಕುಂಭ ಸ್ಥಾಪನೆ ಕಾರ್ಯಕ್ರಮವು ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯ ಮೂಲಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕ ಪರಮಪೂಜ್ಯ ಶ್ರೀ ಹರಿನಾರಾಯಣ ಅಸ್ರಣ್ಣರನ್ನು ಸ್ವಾಗತಿಸಿ ಅವರ ಅಮೃತಹಸ್ತದಿಂದ ಚಿನ್ನ-ಬೆಳ್ಳಿಯ ನಾಣ್ಯಗಳನ್ನು ಹಾಕುವುದರ ಮೂಲಕ ಷಡಾಧಾರ-ನಿಧಿಕುಂಭ ಸ್ಥಾಪನೆ ನೆರವೇರಿತು.

ನಂತರ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಹರಿನಾರಾಯಣ ಅಸ್ರಣ್ಣರರು ಲೋಕದಲ್ಲಿ ಇರುವ ಗಾಳಿ ಬರಲು ಬೀಸಣಿಗೆ ಹೇಗೆ ಬೇಕೊ ಹಾಗೆ ದೇವರ ಅನುಗ್ರಹಕ್ಕೆ ನಾವು ಶ್ರೀ ವನದುರ್ಗಾದ ಈ ಜಾಗಕ್ಕೆ ಬರಬೇಕು.ನಮಗೆ ಒಂದು ದೇಹ ಆದರೆ ದೇವರಿಗೆ ಅನೇಕ ದೇಹವಿದೆ,ದೇವರು ಎಂಟು ರೂಪದಲ್ಲಿ ಹೊರ ಬರುತ್ತಾರೆ.ಭೂಮಿಯ ನೇರ ಸಂಬಂಧ ದೇವರ ಬಿಂಬಕ್ಕೆ ಇರುತ್ತದೆ ಈ ರೀತಿಯಲ್ಲಿ ಗರ್ಭಗುಡಿ ನಿರ್ಮಾಣವಾಗಿರುತ್ತದೆ. ಭಕ್ತಿ ಎಂಬುದು ನಮ್ಮ ಮನಸ್ಸಿನಿಂದ,ಆತ್ಮ ಸುದ್ದಿಯಿಂದ ಬರಬೇಕು ಎಂಬುದಾಗಿ ಆಶೀರ್ವಚನ ನೀಡಿದರು.

ಕೊಕ್ಕಡ ಪಂಚಮಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮೋಹನದಾಸ ಗೌಡ,ಕಾಳಬೈರವ ಆಡಳಿತ ಸಮಿತಿ ಅಧ್ಯಕ್ಷ ರಾಜರಾಮ್.ಟಿ ಮುದ್ದಿಗೆ ಸಂದರ್ಭೋಚಿತವಾಗಿ ಮಾತನಾಡಿ, ಶುಭವನ್ನು ಹಾರೈಸಿದರು.
ವೇದಿಕೆಯಲ್ಲಿ ಗುಡ್ರಾದಿ ಶ್ರೀ ಗುಡ್ರಮಲ್ಲೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ,ಆಡಳಿತ ಸಮಿತಿ ಅಧ್ಯಕ್ಷ ಪದ್ಮಯ್ಯ ಬಾರಿಗ,ಅರಸನಮಕ್ಕಿ ಗ್ರಾ.ಪಂ ಅಧ್ಯಕ್ಷ ನವೀನ್,ದೇವಸ್ಥಾನದ ಶಿಲ್ಪಿ ವಿಜಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದೇವಳದ ಅರ್ಚಕರು, ಬೈಲುವಾರು ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಊರ ಪರವೂರ ಭಕ್ತಾಧಿಗಳು ಭಾಗವಹಿಸಿದರು.
ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ,ವೃಷಾಂಕ್ ಖಾಡಿಲ್ಕರ್ ಸ್ವಾಗತಿಸಿ, ವನದುರ್ಗ ಮಹಿಳಾ ಸಂಘದ ಕಾರ್ಯದರ್ಶಿ ಶ್ರೀಮತಿ ನೀತಾರಾಜೇಶ್ ವಂದಿಸಿದರು, ಮುರಳೀಧರ ಶೆಟ್ಟಿಗಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

—ಜಾಹೀರಾತು—

Leave a Reply

error: Content is protected !!